ಹಾಂಗ್ ಜಹೌ, ಸೆ .5: ಇತ್ತೀಚಿಗೆ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ತೆರೆಸಾ ಮೇ ಅವರನ್ನು ಇಂದು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮೆ ಅವರಿಗೆ ಶುಭಾಶಯ ಕೋರಿ, ದ್ವಿಪಕ್ಷೀಯ ಸಂಭಂದ ವೃದ್ಧಿಸುವ ಕುರಿತು ಮಾತುಕತೆ ನಡೆಸಿದರು.
ಈ ಕುರಿತಂತೆ ಎಂದು ಟ್ವೀಟ್ ಮಾಡಿರುವ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್,
ಯುರೋಪಿಯನ್ ಒಕ್ಕೂಟದಿಂದ ಇಂಗ್ಲೆಂಡ್ ಹೊರಬಂದ ನಂತರ ಇಂಗ್ಲೆಂಡ್ ಜೊತೆ ನಡೆದ ಮೊದಲ ದ್ವಿಪಕ್ಷೀಯ ಮಾತುಕತೆ ಇದಾಗಿದೆ. ಉಭಯ ಮುಖಂಡರು ಇಂದು ಮಾತುಕತೆ ನಡೆಸಿದ್ದು, ಯುರೋಪಿಯನ್ ಒಕ್ಕೂಟದಿಂದ ಹೊರಬರಲು ಇಂಗ್ಲೆಂಡ್ ಮತ ಚಲಾಯಿಸಿದ ನಂತರ ಅವಕಾಶಗಳ ಬಲವರ್ಧನೆ ಕುರಿತು ಚರ್ಚೆ ನಡೆಸಿದರು. ಪರಿಣಾಮಕಾರಿ ಆಡಳಿತ ನಡೆಸುವುದು, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದು, ಕಪ್ಪುಹಣ ಹಾಗು ತೆರಿಗೆ ವಂಚನೆ ನಡೆಯದಂತೆ ತಡೆಯುವ ಕುರಿತು ಮಾತುಕತೆ ನಡೆಸಲಾಗಿದೆ ಎಂದಿದ್ದಾರೆ.
ಯುರೋಪಿಯನ್ ಒಕ್ಕೂಟದಿಂದ ನಿರ್ಗಮಿಸಿದ ನಂತರ ಪ್ರಧಾನ ಮಂತ್ರಿ ಸ್ಥಾನಕ್ಕೆ ಡೇವಿಡ್ ಕ್ಯಾಮರನ್ ರಾಜೀನಾಮೆ ನೀಡಿದ ನಂತರ ತೆರೆಸಾ ಅಧಿಕಾರ ಸ್ವೀಕರಿಸಿದ್ದಾರೆ. ಮಾರ್ಗರೇಟ್ ತ್ಯಾಚರ್ ನಂತರ ತೆರೆಸಾ ಮೆ ಅಧಿಕಾರ ವಹಿಸಿಕೊಂಡಿದ್ದಾರೆ.
ಜುಲೈ 27ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ತೆರೆಸಾ ಮೆಯವರಿಗೆ ಮೋದಿ ಧನ್ಯವಾದ ಹೇಳಿದರು. ಅಲ್ಲದೆ ದ್ವಿಪಕ್ಷೀಯ ಸಹಭಾಗಿತ್ವ ಕಾರ್ಯತಂತ್ರವನ್ನು ಬಲಪಡಿಸಲು ಭಾರತ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು.
Discussion about this post