Read - < 1 minute
ನವದೆಹಲಿ, ಅ.18: ಮೂರು ದಿನಗಳ ಭಾರತ ಭೇಟಿಯಲ್ಲಿರುವ ಮ್ಯಾನ್ಮಾರ್ ನಾಯಕಿ ಆಂಗ್ ಸಾಂಗ್ ಸೂಕಿ ಅವರಿಗೆ ರಾಷ್ಟ್ರಪತಿ
ಭವನದಲ್ಲಿಂದು ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ಸೂಕಿ ಅವರನ್ನು ಬರಮಾಡಿಕೊಂಡರು. ನಂತರ ಮ್ಯಾನ್ಮಾರ್ ನಾಯಕಿ ಗೌರವ ವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಮತ್ತೊಮ್ಮೆ ಭೇಟಿ ನೀಡಿರುವುದು ತಮಗೆ ಸಂತೋಷ ತಂದಿದೆ. ಮ್ಯಾನ್ಮಾರ್ ಮತ್ತು ಭಾರತ ಮಿತ್ರ ರಾಷ್ಟ್ರಗಳಾಗಿ ಮುಂದುವರಿಯುವುದು ತಮ್ಮ ಇಚ್ಛೆಯಾಗಿದೆ ಎಂದು ಹೇಳಿದರು.
Discussion about this post