Read - < 1 minute
ನವದೆಹಲಿ,ಸೆ.23: ಪಾಕಿಸ್ತಾನ ಮತ್ತು ಭಾರತ ನಡುವೆ ಉದ್ವಿಗ್ನತೆ ತಾರಕ್ಕೇರಿರುವ ಮಧ್ಯೆ ಯಾವುದೇ ಸಂಭಾವ್ಯ ದಾಳಿಗೆ ಭಾರತದಲ್ಲಿನ ಗುರಿಗಳನ್ನು ಪಾಕಿಸ್ಥಾನ ಸಶಸ್ತ್ರ ಪಡೆಗಳು ಆಯ್ಕೆ ಮಾಡಿವೆ ಎಂದು ಶುಕ್ರವಾರ ಪ್ರಕಟವಾದ ವರದಿಯೊಂದು ಹೇಳಿದೆ.
ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಸಂಭಾವ್ಯ ಆಕ್ರಮಣವನ್ನು ಎದುರಿಸಲು ಪಾಕಿಸ್ಥಾನ ಮಿಲಿಟರಿ ಕಾರ್ಯಾಚರಣೆ ಯೋಜನೆಯೊಂದನ್ ನು ಸಿದ್ಧಪಡಿಸಿದೆ ಎಂದು ಜಿಯೋ ಟಿವಿ ವರದಿಯೊಂದು ಹೇಳಿದೆ.
ವೈರಿಯಿಂದ ಆಕ್ರಮಣ ಅಥವಾ ಮುನ್ನುಗ್ಗಿ ದಾಳಿಗಳು ನಡೆದಲ್ಲಿ ಅದಕ್ಕೆ ಸೇಡು ತೀರಿಸಲು `ಯುದ್ಧ ಬಯಸುವ’ ಭಾರತದಲ್ಲಿನ ಗುರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಕ್ಷಣಾ ಮೂಲವೊಂದು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಭಾರತದಿಂದ ಎದುರಾಗುವ ಯಾವುದೇ ಮಿಲಿಟರಿ ಸವಾಲನ್ನು ಎದುರಿಸಲು ಪಾಕಿಸ್ಥಾನ ಸಂಪೂರ್ಣ ಸನ್ನದ್ಧವಾಗಿದೆ. ನಮ್ಮ ಕಾರ್ಯಾಚರಣಾ ಯೋಜನೆ ಸಿದ್ಧವಾಗಿದೆ. ಗುರಿಗಳನ್ನು ಅಂತಿಮಗೊಳಿಸಲಾಗಿದೆ. ಪಡೆಗಳು ಸಮರ್ಪಣಾಭಾವದಿಂದಿವೆ ಎಂದು ಮೂಲಗಳು ಹೇಳಿವೆ.
ಪಾಕಿಸ್ಥಾನ ಪಡೆಗಳು ಬಹಳ ಕಟ್ಟೆಚ್ಚರದಿಂದ ಇರಲಿವೆ. ಮುಂಬರುವ ಕಾಲದಲ್ಲಿ ಬೆಳವಣಿಗೆಗಳು ಹೇಗೆ ಸಂಭವಿಸುತ್ತವೆ ಎಂಬ ಬಗ್ಗೆ ಚಿಂತೆ ಇಲ್ಲ ಎಂದು ಇನ್ನೊಂದು ಮೂಲ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಅದು ನಿಧಾನವಾಗಿ ಆರಂಭವಾಗಲಿ ಅಥವಾ ಬಿರುಸಿನ ದಾಳಿಯಾಗಲಿ ನಾವು ಸಿದ್ಧರಿದ್ದೇವೆ. ನಮ್ಮ ಸಾಮಥ್ರ್ಯದ ಬಗ್ಗೆ ಭಾರತಕ್ಕೆ ಚೆನ್ನಾಗಿ ತಿಳಿದಿದೆ. ಅಲ್ಲದೆ ಆಂತರಿಕ ಭದ್ರತಾ ವಿಷಯಗಳಲ್ಲಿ ಪಾಕಿಸ್ಥಾನ ಸೇನೆಯು ಆಗವಹಿಸುವಿಕೆಯ ಹೊರತಾಗಿಯು ಗಡಿಯಾಚೆಯಿಂದ ಎದುರಾಗುವ ಯಾವುದೇ ಸವಾಲನ್ನು ಎದುರಿಸಲು ಮಿಲಿಟರಿ ಸಮತೋಲನವನ್ನು ಚೆನ್ನಾಗಿ ಕಾಯ್ದುಕೊಳ್ಳಲಿದೆ ಎಂಬುದೂ ಅದಕ್ಕೆ ತಿಳಿದಿದೆ. ಭಾರತ ಮುನ್ನುಗ್ಗಿ ದಾಳಿ ನಡೆಸಿದ ಸಂದರ್ಭದಲ್ಲಿ ಪಾಕಿಸ್ಥಾನ ತಕ್ಷಣ ಪ್ರತಿಕ್ರಿಯಿಸಲಿದೆ. ಅದಕ್ಕಾಗಿ ಗುರಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
Discussion about this post