Read - < 1 minute
ಕೋಲ್ಕತಾ, ಸೆ.7: ಪ್ರಿಯಾಂಕಾ ಯೊಶಿಕಾ ವಾ…22ರ ಹರೆಯದ ಈ ಸುಂದರಿ ಹಾಫ್ ಇಂಡಿಯನ್! ಇದೀಗ ಮಿಸ್ ಜಪಾನ್ ಆಗಿ ಕಿರೀಟ ಧರಿಸಿರುವ ಈಕೆಯ ಮೂಲ ಗೊತ್ತೇ…?
ಪಶ್ಚಿಮ ಬಂಗಾಳದ ಮೊತ್ತ ಮೊದಲ ಮುಖ್ಯಮಂತ್ರಿ ಪ್ರಪುಲ್ಲ ಚಂದ್ರ ಘೋಷ್ ಅವರ ಮರಿ ಮೊಮ್ಮಗಳು. ಕಳೆದ 36 ವರ್ಷಗಳ ಹಿಂದೆ ಪ್ರಿಯಾಂಕಾ ಅಪ್ಪ ಅರುಣ್ ಘೋಷ್ ಜಪಾನ್ ಗೆ ವಲಸೆ ಹೋಗಿ ನೆಲೆಸಿದ್ದರು. ಅಲ್ಲಿನ ಶಾಲೆಯೊಂದರಲ್ಲಿ ಬೆಂಗಾಳಿ ಭಾಷೆ ಶಿಕ್ಷಕಿಯಾಗಿದ್ದ ನವೋಲಾ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿ ಮಗಳೇ ಪ್ರಿಯಾಂಕಾ ಯೋಶಿಕಾವಾ. ಪ್ರಿಯಾಂಕಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ನಾನು ಭಾರತೀಯಳು ಎಂದು.
Discussion about this post