ಮೈಸೂರು, ಸೆ.2: ಕಾರ್ಮಿಕ ವಿರೋಧಿ ನೀತಿ ಎಂದು ಆರೋಪಿಸಿ ಇಂದು ಕರೆ ನೀಡಲಾಗಿರುವ ಭಾರತ್ ಬಂದ್‌ಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಎಂದಿಂತೆ ಸಾಗಿದೆ.
ನಗರದಲ್ಲಿ ಕೆಲವು ಶಾಲೆಗಳು ಮಾತ್ರ ರಜೆ ಘೋಷಿಸಿದ್ದು, ಬಹುತೇಕ ಶಾಲಾ ಕಾಲೇಜುಗಳು ಎಂದಿನಂತೆ ನಡೆಯುತ್ತಿವೆ. ಇನ್ನು, ಸ್ವಂತ ಶಾಲಾ ವಾಹನ ಹೊಂದಿರುವ ಶಾಲೆಗಳು ರಜೆ ಘೋಷಿಸಿಲ್ಲ. ಎಂದಿನಂತೆ ತಮ್ಮ ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರಮುಖವಾಗಿ Dee Paul International school, Mysore public school, BGS ಶಾಲೆಗಳು ಎಂದಿನಂತೆ ಜರುಗಿದವು.
ಸಂಚಾರಕ್ಕಿಲ್ಲ ತೊಂದರೆ
ಭಾರತ್ ಬಂದ್ ನಗರದ ವಾಹನ ಸಂಚಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.KSRTC BUS, ಆಟೋ ಸಂಚಾರ ಎಂದಿನಂತೆ ಇತ್ತು. ಪ್ರತಿ ದಿನಕ್ಕೆ ಹೋಲಿಕೆ ಮಾಡಿದರೆ ಸಂಚಾರ ಕೊಂಚ ವಿಳಂಬವಾಗಿತ್ತು ಎನ್ನುವುದು ಹೊರತುಪಡಿಸಿದರೆ, ಸಾರಿಗೆ ಸಂಚಾರ ಬಹುತೇಕ ಲಭ್ಯವಿತ್ತು.
ಎಂದಿನಂತೆ ವ್ಯಾಪಾರ
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಸಾಗಿತ್ತು. ನಗರದ ಹೃದಯಭಾಗದಲ್ಲಿರುವ ನಂಜುಮಳಿಗೆಯಲ್ಲಿ ವ್ಯಾಪಾರ ಎಂದಿನಂತೆ ಸಾಗಿತ್ತು. ಭಾನುವಾರ ಗೌರಿ ಹಬ್ಬ ಹಾಗೂ ಸೋಮವಾರ ಗಣಪತಿ ಹಬ್ಬ ಇರುವ ಹಿನ್ನೆಲೆಯಲ್ಲಿ ಜನರು ಪೂಜಾ ಸಾಮಗ್ರಿ ಖರೀದಿಸುವಲ್ಲಿ ನಿರತರಾಗಿದ್ದರು. ಒಟ್ಟಾರೆ ನಗರದ ವ್ಯಾಪಾರ ವಹಿವಾಟಿನ ಮೇಲೆ ಭಾರತ್ ಬಂದ್ ಯಾವುದೇ ರೀತಿಯ ಪರಿಣಾಮ ಬೀರಿಲ್ಲ.
News by: ಪುನೀತ್ ಕೂಡ್ಲೂರು
ಬಂದ್ ಕುರಿತಾಗಿ ಮೈಸೂರಿನ ಮತ್ತಷ್ಟು ಸುದ್ಧಿಗಾಗಿ ನಿರೀಕ್ಷಿಸಿ….
Discussion about this post