Read - < 1 minute
ಇಸ್ಲಾಮಾಬಾದ್, ಸೆ. 21, ಉರಿ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ವಾಯು ಪ್ರದೇಶ ನಿರ್ಬಂಧಗಳ ಕಾರಣದಿಂದಾಗಿ ಪಾಕಿಸ್ಥಾನದ ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಪಿಐಎ ಬುಧವಾರ ಉತ್ತರದ ಪಾಕಿಸ್ಥಾನಿ ನಗರಗಳಿಗೆ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿತು.
ಪಾಕಿಸ್ಥಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್ (ಪಿಐಎ) ಗಿಲ್ಗಿಟ್ ಮತ್ತು ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಎಒಕೆ)ಯಲ್ಲಿ ಗಲ್ಲಿಟ್ – ಬಲ್ಟಿಸ್ಥಾನ್ ವಲಯದಲ್ಲಿನ ಸ್ಕಡರ್ು ಹಾಗೂ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿನ ಚಿತ್ರಾಲ್ಗೆ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ.
ನಾಗರಿಕ ವಾಯುಯಾನ ಪ್ರಾಧಿಕಾರಿ (ಸಿಎಎ)ದ ನಿದರ್ೇಶನಗಳನ್ವಯ ಉತ್ತರದ ಪ್ರದೇಶಗಳ ಮೇಲಿನ ವಾಯು ಕ್ಷೇತ್ರ ಬುಧವಾರ ಮುಚ್ಚಿರುತ್ತದೆ. ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ ಎಂದು ಪಿಐಎ ವಕ್ತಾರ ಟ್ವೀಟ್ ಮಾಡಿದ್ದಾರೆ.
ವಾಯು ಕ್ಷೇತ್ರ ಮುಚ್ಚಿರುವುದಕ್ಕೆ ಯಾವುದೇ ಕಾರಣವನ್ನು ಅವರು ನೀಡಿಲ್ಲ. ಆದರೆ ಉರಿ ದಾಳಿಯ ನಂತರ ಭಾರತ – ಪಾಕ್ ನಡುವೆ ಉದ್ನಿಗ್ವತೆ ತಲೆ ಎತ್ತಿದ ಕಾರಣ ನಿಗಾ ವಹಿಸುವುದಕ್ಕಾಗಿ ಪಾಕಿಸ್ಥಾನಿ ಯುದ್ಧ ವಿಮಾನಗಳು ಹಾರಾಟ ನಡೆಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
Discussion about this post