ಉಡುಪಿ.ಸೆ.27- ಎನ್.ಆರ್.ಐ. ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯನಾಶ ಮಾಡಿದ ಆರೋಪಿಗಳ ಜಾಮೀನು ಅರ್ಜಿಯನ್ನು ವಿಚಾರಣೆ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಆರಂಭವಾಯಿತು ಮತ್ತು ಮುಂದಿನ ವಿಚಾರಣೆಯನ್ನು ಸೆ.27 ನಿಗದಿಪಡಿಸಲಾಯಿತು.
ಈ ಪ್ರಕರಣದ ಸಾಕ್ಷ್ಯನಾಶ ಆರೋಪಿಗಳಾದ ಶ್ರೀನಿವಾಸ ಭಟ್ಟ ಮತ್ತು ರಾಘವೇಂದ್ರ ಅವರಿಗೆ ಜಾಮೀನಿಗೆ ವಕೀಲ ವೈ. ವಿಕ್ರಮ್ ಹೆಗ್ಡೆ ಅವರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಧೀಶರು ಶನಿವಾರ ವಿಕ್ರಮ್ ಹೆಗ್ಡೆ ಅವರ ವಾದವನ್ನು ಆಲಿಸಿದರು, ಸರ್ಕಾರಿ ಅಭಿಯೋಜಕರು ವಾದ ಮಂಡಿಸಲು ಸೆ.27ಕ್ಕೆ ಮುಂದೂಡಲಾಯಿತು.
ಜು. 28 ಭಾಸ್ಕರ ಶೆಟ್ಟಿ ಅವರನ್ನು ಪತ್ನಿ ರಾಜೇಶ್ವರಿ ಶೆಟ್ಟಿ ಮತ್ತು ಮಗ ನವನೀತ ಶೆಟ್ಟಿ ಮನೆಯಲ್ಲಿಯೇ ಹೊಡೆದು ಬಡಿದು ಅಮಾನುಷವಾಗಿ ಕೊಲೆ ಮಾಡಿದ್ದರು. ಬಳಿಕ ಬೆಳ್ಮಣ್ ಸಮೀಪದ ನಂದಳಿಕೆಯ ಸ್ವಯಂಘೋಷಿತ ಜ್ಯೋತಿಷಿ ನಿರಂಜನ ಭಟ್ಟನ ಮನೆಯಲ್ಲಿ ಶವವನ್ನು ಸುಡಲಾಗಿತ್ತು. ಈ ಸಂದರ್ಭದಲ್ಲಿ ನಿರಂಜನನ ತಂದೆ ಶ್ರೀನಿವಾಸ ಭಟ್ಟ ಹಾಗೂ ಕಾರು ಚಾಲಕ ರಾಘವೇಂದ್ರ ಸಾಕ್ಷ್ಯ ನಾಶಕ್ಕೆ ಸಹಕರಿಸಿದ್ದರು ಎಂದು ಅವರನ್ನು ಬಂಧಿಸಲಾಗಿತ್ತು. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
Discussion about this post