Read - < 1 minuteನಾಸಾ,ಅ.13: ಸುಮಾರು 1000 ಕ್ಷುದ್ರಗ್ರಹಗಳು (ಆಸ್ಟಿರೋಯ್ಡ್ಸ್) ಭೂಮಿಗೆ ಅಪ್ಪಳಿಸಲಿದ್ದು, ಭೂಮಿಯಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಲಿವೆ ಎಂಬ ಆತಂಕಕಾರಿ ಅಂಶವನ್ನು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. ಗಂಟೆಗೆ 60,000 ಮೈಲಿಗಳ ವೇಗದಲ್ಲಿ ಸುಮಾರು ಒಂದು ಸಾವಿರ ಕ್ಷುದ್ರಗ್ರಹಗಳು ಭೂಮಿ ಸನಿಹಕ್ಕೆ ಬರುತ್ತಿವೆ ಎಂಬ ವರದಿಗಳುಕೂಡ ಬಂದಿವೆ.
ಇದರ ಬೆನ್ನಲ್ಲೇ ನಾಲ್ಕು ಕ್ಷುದ್ರಗ್ರಹಗಳು ಮತ್ತು ಬೃಹತ್ ಗಾತ್ರದ ಆಕಾಶಕಾಯಗಳು ಭೂಮಿಗೆ ತೀರಾ ಹತ್ತಿರದಲ್ಲೇ ಹಾದುಹೋದ ಬಗ್ಗೆ ಇತ್ತೀಚೆಗಷ್ಟೆ ವರದಿಯಾಗಿದೆ. ಈ ನಿಟ್ಟಿನಲ್ಲಿ ಖಗೋಳ ವಿಜ್ಞಾನಿಗಳ ವಾದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ಹೀಗಾಗಿ ಮುಂದಿನ ಕೆಲವು ವರ್ಷಗಳಲ್ಲಿ ಇನ್ನಷ್ಟು ಕ್ಷುದ್ರಗ್ರಹಗಳು ಭೂಮಂಡಲ ಸಮೀಪಕ್ಕೆ ಬರಲಿದ್ದು, ಸರ್ವನಾಶ ಉಂಟುಮಾಡಲಿದೆ ಎಂಬುದು ಹಲವರ ಹೇಳಿಕೆ.
ಅದೇನೇ ಇರಲಿ, ಪ್ರಸ್ತುತ ವಿಚಾರವೇನೆಂದರೆ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಕ್ಷುದ್ರಗ್ರಹಗಳ ಮಹತ್ವದ ಅಧ್ಯಯನ ಮತ್ತು ಸಂಶೋಧನೆಗಳನ್ನು ಆರಂಭಿಸಿದೆ. ಭೂಮಿಗೆ ಗಂಡಾಂತರ ಸೃಷ್ಟಿಸಿಸುವ ಕ್ಷುದ್ರಗ್ರಹದ ಬೆನ್ನಟ್ಟಿರುವ ನಾಸಾ, ಈ ನಿಟ್ಟಿನಲ್ಲಿ ಕ್ಷುದ್ರಗ್ರಹಗಳ ಸಮಗ್ರ ಅಧ್ಯಯನ ಮತ್ತು ಅವುಗಳು ಚಲಿಸುವ ದಿಕ್ಕಿನ ಜಾಡನ್ನು ಪತ್ತೆ ಮಾಡಲು ತನ್ನ ಓಸಿರಿಸ್-ಆರಿಎಕ್ ಯೋಜನೆಯಲ್ಲಿ ನಿರತವಾಗಿದೆ. ಕ್ಷುದ್ರಗ್ರಹಗಳ ಕಕ್ಷೆಯ ದಿಕ್ಕನ್ನು ಬೇರೆಡೆ ಬದಲಿಸಲು ಸಾಧ್ಯವೇ ಎಂಬ ಬಗ್ಗೆ ಕೂಡ ಅಧ್ಯಯನ ನಡೆದಿದೆ.
ಕ್ಷುದ್ರಗ್ರಹಗಳು, ಭಯಾನಕ ಉಲ್ಕೆಗಳು, ಅಂತರಿಕ್ಷ ಶಿಲೆಗಳ ಮಾದರಿಗಳನ್ನು ಸಂಗ್ರಹಿಸಿ ಆ ಮೂಲಕ ಅವುಗಳ ಗಾತ್ರ, ಸಾಮಥ್ರ್ಯ ಮತ್ತು ಚಲನೆ ದಿಕ್ಕು-ಇವುಗಳ ಬಗ್ಗೆ ಸಂಶೋಧನೆ ನಡೆಸಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿದೆ. ಕ್ಷುದ್ರಗ್ರಹಗಳು, ದೈತ್ಯಾಕಾರದ ಬಂಡೆಗಳು, ಉಲ್ಕೆಗಳು, ಧೂಮಕೇತುಗಳ ಸಂಯೋಜನೆ ಮತ್ತು ರಚನೆಯನ್ನು ತಿಳಿಯಲು ಈ ಸಂಶೋಧನೆ ಸಹಕಾರಿಯಾಗಿದ್ದು, ಇದರಿಂದ ಭವಿಷ್ಯದ ದುಷ್ಪರಿಣಾಮವನ್ನು ನಿಖರವಾಗಿ ಊಹಿಸಲು ಖಗೋಳವಿಜ್ಞಾನಿಗಳಿಗೆ ನೆರವಾಗಿದೆ. ಇದರಿಂದ ಗ್ರಹಗಳು ಮತ್ತು ಭೂಮಿಯ ಉಗಮ ಮತ್ತು ಆಯಸ್ಸಿನ ಬಗ್ಗೆಯೂ ಹೆಚ್ಚಿನ ವಿಷಯಗಳನ್ನು ಕಲೆಹಾಕಲು ನೆರವಾಗಿದೆ.
ಭೂಮಿಗೆ ಸಮೀಪದಲ್ಲೇ ಈ ಕ್ಷುದ್ರಗ್ರಹಗಳು ಹಾದು ಹೋಗಿರುವುದರಿಂದ ಭವಿಷ್ಯದಲ್ಲಿ ಪ್ರಳಯ ಖಚಿತ ಎಂದು ಹಲವರು ಅಭಿಪ್ರಾಯಪಡುತ್ತಾರೆ. ಭವಿಷ್ಯದಲ್ಲಿ ಉಂಟಾಗಬಹುದಾದ ಅಪಾಯಕಾರಿ ಆಕಾಶಕಾಯಗಳ ದಾಳಿಯ ಪರಿಣಾಮವನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸುವ ಉದ್ದೇಶದಿಂದಲೇ ನಾಸಾ ಈ ಯೋಜನೆಯಲ್ಲಿ ನಿರತವಾಗಿವೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ವಿವರಿಸಿದ್ದಾರೆ. ಲಕ್ಷಾಂತರ ಪ್ರಭಾ ವರ್ಷಗಳ ಅಂತರದಲ್ಲಿರುವ ಭಾರೀ ಸಂಖ್ಯೆ ಕ್ಷುದ್ರಗ್ರಹಗಳು ಭೂಮಿಯತ್ತ ಶರವೇಗದಲ್ಲಿ ಧಾವಿಸುತ್ತಿದ್ದು, ಇವುಗಳ ಕಕ್ಷೆಯ ದಿಕ್ಕನ್ನು ಬೇರೆಡೆ ಬದಲಿಸಲು ಸಾಧ್ಯವೇ ಎಂಬ ಬಗ್ಗೆಯೂ ಪ್ರಯೋಗ-ಪರೀಕ್ಷೆಗಳು ನಡೆಯುತ್ತಿವೆ.
Discussion about this post