ನವದೆಹಲಿ: ಆ;29: ಅಸಲು, ಬಡ್ಡಿ ಸೇರಿದಂತೆ ಸುಮಾರು 9,000 ಕೋಟಿ ರೂಪಾಯಿ ಸಾಲವನ್ನು ವಿವಿಧ ಬ್ಯಾಂಕ್ ಗಳಿಗೆ ಕೊಡಬೇಕಿರುವ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ.
ಮಲ್ಯ ಒಡೆತನದ ಕಿಂಗ್ ಫಿಶ್ ಏರ್ ಲೈನ್ಸ್ ಗೆ 2007 ರಿಂದ 2010 ರ ಅವಧಿಯಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸುಮಾರು 1,600 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಮೊದಲಿಗೆ ಕಿಂಗ್ ಫಿರ್ಶ ರ್ಏ ಲೈನ್ಸ್ಗೆ ಸಾಲ ನೀಡಿದ್ದು, ಅದನ್ನು ತೀರಿಸದಿದ್ದರೂ, ಎರಡನೇ ಬಾರಿಗೆ ಸಾಲ ಕೊಡಲಾಗಿದೆ. ಹೀಗೆ ಸಾಲ ಕೊಡುವ ಸಂದರ್ಭದಲ್ಲಿ ದಾಖಲೆ ಇಲ್ಲದೇ ಸಾಲ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಆ ಅವಧಿಯಲ್ಲಿ ಬ್ಯಾಂಕ್ ಅಧಿಕಾರಿಗಳಾಗಿದ್ದವರನ್ನು ತನಿಖೆಗೆ ಒಳಪಡಿಸಲಾಗುವುದು.
ಕೇಂದ್ರ ಸಕರ್ಾರದ ಕಾಪರ್ೋರೇಟ್ ಸಚಿವಾಲಯದ ತನಿಖಾ ಸಂಸ್ಥೆಯಿಂದ, ದಾಖಲೆ ಇಲ್ಲದೇ ಕಿಂಗ್ ಫಿಶರ್ ಏರ್ಲೈನ್ಸ್ಗೆ ಸಾಲ ನೀಡಿದ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು.ಅನೇಕ ರಾಷ್ಟ್ರೀಕೃತ ಬ್ಯಾಂಕ್ ಗಳ ಮಾಜಿ ಮುಖ್ಯಸ್ಥರನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ವರದಿಯಾಗಿದೆ.
Discussion about this post