Read - < 1 minute
ಬೆಂಗಳೂರು: ಸೆ:1: ಮಹದಾಯಿ ನ್ಯಾಯಾಧೀಕರಣದ ಮುಖ್ಯಸ್ಥ ಪಾಂಚಾಲ್ ಅವರು ಮೂರು ರಾಜ್ಯಗಳು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನೀಡಿರುವ ಸಲಹೆಯನ್ನು ಸ್ವಾಗತಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಮಹದಾಯಿ ನದಿ ನೀರು ಹಂಚಿಕೆ ವಿವಾದದ ವಿಚಾರಣೆ ವೇಳೆ ಮೂರು ರಾಜ್ಯಗಳಿಗೆ ನ್ಯಾಯಾಧೀಕರಣ ಸಲಹೆ ಕೊಟ್ಟಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬೇಕೆಂದು ಸಲಹೆ ನೀಡಿದ್ದಾರೆ. ಈ ಸಲಹೆಯನ್ನ ನಾವು ಸ್ವಾಗತ ಮಾಡುತ್ತೇವೆ ಎಂದರು.
ಮಾತುಕತೆ ಮುಖಾಂತರ ಸಮಸ್ಯೆ ಬಗೆಹರಿಯಬೇಕೆಂದು ನಾವು ಹೇಳುತ್ತಲೇ ಬಂದಿದ್ದೇವೆ. ಇದೀಗ ನ್ಯಾಯಾಧೀಕರಣದವೇ ಈ ಸಲಹೆ ನೀಡಿದೆ. ಇದೊಂದು ಒಳ್ಳೇಯ ಬೆಳವಣಿಗೆ.ಈಗ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಮಹದಾಯಿ ನ್ಯಾಯಾಧೀಕರಣದ ಮುಖ್ಯಸ್ಥ ಪಾಂಚಾಲ್ ಅವರು ಮೂರು ರಾಜ್ಯಗಳು ಮಾತುಕತೆ ಮೂಲಕ ಸಮಸ್ಯೆ ಯನ್ನು ಬಗೆಹರಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಮಾತುಕತೆಗೆ ನಾವು ಸದಾ ಸಿದ್ದವಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ಕರೆದರೆ ಅಲ್ಲಿಗೆ ಹೋಗುತ್ತೇವೆ. ಬೆಂಗಳೂರನಲ್ಲಿ ಮಾತುಕತೆ ಮಾಡಬೇಕೆಂದರೂ ನಾವು ಸಿದ್ಧರಿದ್ದೇವೆ. ನ್ಯಾಯಾಧೀಕರಣ ಸಲಹೆ ನೀಡಿರೋ ಹಿನ್ನಲೆಯಲ್ಲಿ ಪ್ರಧಾನಿಗಳೇ ಮಾತುಕತೆಗೆ ಮೂರು ರಾಜ್ಯದವರನ್ನು ಕರೆಯುವುದು ಸೂಕ್ತ ಎಂದರು.
ನ್ಯಾಯಾಧಿಕರಣದ ಸಲಹೆ ಸಂಬಂಧ ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಪ್ರಧಾನಿಗಳಿಗೂ ಪತ್ರ ಬರೆದು ಮಧ್ಯಸ್ಥಿಕೆಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದರು.
Discussion about this post