ಉಡುಪಿ. ಅ;21– ದ್ವಾರಕೆಯಿಂದ ಕಡಲಿನಲ್ಲಿ ಮಲ್ಪೆಗೆ ಬಂದು ಶ್ರೀ ಮಧ್ವಾಚಾರ್ಯರಿಗೊಲಿದು ಉಡುಪಿಯಲ್ಲಿ ಶ್ರಿ ಕೃಷ್ಣ ನೆಲೆನಿಂತ ಉಡುಪಿ ಈ ದೇಶದ ಹೆಮ್ಮೆಯಯಾತ್ರಾ ಸ್ಥಳ . ಅಷ್ಟ ಮಠಾಧೀಶರುಗಳಿಂದ ಕಳೆದ 8 ಶತಮಾನಗಳಿಂದ ನಡೆಯುತ್ತಿರುವ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬಹುವಿಧದ ಆರಾಧನೆಗಳು ಸೇವಾಕಾರ್ಯಗಳು ನಾಡಿನ ಅಸ್ತಿಕಜನರ ಭಕ್ತಿ ಆದರಗಳಿಗೆ ಪಾತ್ರವಾಗಿವೆ.ದೇಶ ವಿಡೆಶಗಳಿಂದ ನಿತ್ಯ ಸಾವಿರಾರು ಭಕ್ತರುಇಲ್ಲಿನಅನ್ನಪ್ರಸಾದವನ್ನು ಸ್ವೀಕರಿಸಿ ಧನ್ಯರಾಗುತ್ತಿದ್ದಾರೆ. ಪೇಜಾವರ ಶ್ರೀಗಳು ಇಡೀದೇಶ ಹೆಮ್ಮೆಪಡಬೇಕಾದ ಸಂತರು.ಅವರ ವಿದ್ವತ್ತು, ತಪಸ್ಸು , ಸರಳತೆ , ಜನಪರ ಕಾಳಜಿ,ಸೇವಾಕಾರ್ಯಗಳು,ಹಿಂದೂ ಸಮಾಜಕ್ಕೆಅವರು ನೀಡುತ್ತಿರುವ ಮಾರ್ಗದರ್ಶನ ಇತ್ಯಾದಿಗಳು ಅತ್ಯಂತಅಮೂಲ್ಯ ಮತ್ತು ಮಾದರಿಯಾದುದು.
ಹೀಗಿರಬೇಕಾದರೆ ಕಾಮಾಲೆ ಕಣ್ಣಿನ ಕೆಲವು ನಾಸ್ತಿಕ ಮನಸ್ಸಿನ ವ್ಯಕ್ತಿಗಳು ರಾಜಕೀಯ ಪ್ರೇರಿತವಾಗಿ ಕೃಷ್ಣ ಮಠ ಮತ್ತು ಪೇಜಾವರ ಶ್ರೀಗಳ ಮೇಲೆ ದುರುದ್ದೇಶದಿಂದ ನಡೆಸುತ್ತಿರುವ ಅವಮಾನ ಮತ್ತು ಟೀಕೆಗಳನ್ನು ಎಷ್ಟುಮಾತ್ರಕ್ಕೂ ಸಹಿಸೆವು.ಅದೇರೀತಿ ಹಿಂದು ಸಮಾಜದ ಅವಿಭಾಜ್ಯಅಂಗವಾಗಿರುವ ದಲಿತರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವ ಕುತಂತ್ರವನ್ನೂ ಖಂಡಿಸುತ್ತೇವೆ.
ಇದೀಗ ಅದೇ ಮಂದಿ ಕೆಲವು ಮಂದಿ ಮುಗ್ಧರನ್ನು ತಲೆಕೆಡಿಸಿ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುತ್ತೇವೆ ಎನ್ನುತ್ತಿರುವುದನ್ನು ಖಂಡಿಸುತ್ತೇವೆ. ಕೃಷ್ಣ ಮಠವನ್ನು ಹಾಗೂ ಪೇಜಾವರಶ್ರೀಗಳನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು. ಆದರೆ ಯಾವುದೇ ದುರುದ್ದೇಶದಿಂದ ಉಡುಪಿಗೆ ಬಂದರೆ ರಣವೀರರಾಗಿನಿಂತು ನಿಮ್ಮನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಶ್ರೀಕೃಷ್ಣ ಮುಖ್ಯಪ್ರಾಣರ ವಿಶೇಷ ಭಕ್ತರಾದ ನೂರಾರು ಯುವಭಕ್ತರುಗುಡುಗಿದ್ದಾರೆ. ಕೃಷ್ಣ ಮಠಕ್ಕೆ ಮುತ್ತಿಗೆಯ ವಿಚಾರವಾಗಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶುಕ್ರವಾರ ಕರಾವಳಿಯ ವಿವಿಧಜಾತಿ ಸಮುದಾಯಗಳ ಸುಮಾರು 100 ಯುವ ಮುಖಂಡರು ಪೇಜಾವರ ಶ್ರೀಗಳನ್ನು ಭೇಟಿಮಾಡಿ ಕೃಷ್ಣಮಠಕ್ಕೆ ಏನೇ ಸಮಸ್ಯೆಎದುರಾದರೂ ನಾವಿದ್ದೇವೆಎಂದು ಭರವಸೆ ನೀಡಿ , ಮೂರ್ಖರಿಗೆ ದಂಡವೇ ಉತ್ತರವಾಗಬೇಕು ಎಂಬ ಚಾಣಕ್ಯನೀತಿಯನ್ನು ನಾಸ್ತಿಕ ವಿಚಾರವಾದಿಗಳಿಗೆ ನೆನಪಿಸಿಕೊಟ್ಟಿದ್ದಾರೆ .
ನಮ್ಮ ಸಂಸ್ಕೃತಿಯಲ್ಲಿ ರಾಮ-ಕೃಷ್ಣ-ವ್ಯಾಸ ವಾಲ್ಮೀಕಿ ಮೊದಲಾದವರನ್ನು ಅವರು ನೀಡಿದ ಸಾರ್ವಕಾಲಿಕ ಮೌಲ್ಯಗಳು ಮತ್ತು ಆದರ್ಶಗಳಿಗಾಗಿ ದೈವತ್ವಕ್ಕೇರಿಸಿದ್ದೆ ವಿನಹ ಅವರು ಏನನ್ನು ತಿನ್ನುತ್ತಿದ್ದರು ಎಂಬ ಕಾರಣಕ್ಕೆ ಅಲ್ಲ . ರಾಮಾಯಣ ಮಹಾಭಾರತಗಳಲ್ಲೇ ರಾಮ-ಕೃಷ್ಣರು ಏನನ್ನು ತಿನ್ನುತ್ತಿದ್ದರೆಂಬ ಸ್ಪಷ್ಟಉಲ್ಲೇಖವಿಲ್ಲ ಎಂದು ಅನೇಕ ವಿದ್ವಾಂಸರುಗಳು ಹೇಳುತ್ತಿರುವುದೇ ಇದಕ್ಕೆ ಸಾಕ್ಷಿ .ಆದ್ದರಿಂದ ಗೌಣವಾಗಿರುವ ಇಂತಹ ವಿಚಾರಗಳನ್ನು ಅನಗತ್ಯವಾಗಿ ವಿವೇಕ ಶೂನ್ಯರಾಗಿಯಾರೇ ಮಾತಾಡಿದರೂ ಅದು ಅವರಿಗೆ ಶೋಭೆಯಲ್ಲ ಎಂದಿರುವ ಯಶ್ ಪಾಲ್ ಸುವರ್ಣ ,ಶೇಖರ ಶೆಟ್ಟಿ ಹಿರಿಯಡ್ಕ, ಅಕ್ಷಿತ್ ಶೆಟ್ಟಿ ಹೆರ್ಗ, ಮಂಜು ಸಾಲ್ಯಾನ್ ಮಲ್ಪೆ, ಸನತ್ ಮಲ್ಪೆ, ನಿತ್ಯಾನಂದಕಾಮತ್ , ಗಣೇಶ್ ಪೂಜಾರಿ ನಿಟ್ಟೂರು, ದೀಪಕ್ ಶೇಟ್, ಮೊದಲಾದಯುವ ಮುಖಂಡರ ನೇತೃತ್ವದಯುವಕರು ಭಾನುವಾರದಂದು ಸ್ವಾಭಿಮಾನಿ ನಡಿಗೆಯ ಹೆಸರಿನಲ್ಲಿ ಉಡುಪಿಯಲ್ಲಿ ಏನೇ ನಡೆದರೂ ಕೃಷ್ಣ ಮುಖ್ಯಪ್ರಾಣರ ಸಾವಿರಾರುಯುವ ಭಕ್ತರುಭಾಗವಹಿಸಿ ಹಿಮ್ಮೆಟ್ಟಿಸುತ್ತೇವೆಎಂದು ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
Discussion about this post