Read - < 1 minute
ನವದೆಹಲಿ, ಅ.12: ನಿಮ್ಮ ಮೊಬೈಲ್ ಫೋನ್ ಇನ್ನು ಮುಂದೆ 11 ಡಿಜಿಟ್ ಸಂಖ್ಯೆ ಆಗಲಿದೆ. ಈವರೆಗೆ ನೀವು 10 ಸಂಖ್ಯೆಗಳ ಮೊಬೈಲ್ನನ್ನು ಬಳಸುತ್ತಿದ್ದು, ಇನ್ಮೇಲೆ ಅದನ್ನು 11 ಡಿಜಿಟ್ ಸಂಖ್ಯೆಯಾಗಿ ಪರಿವರ್ತಿಸಲು ದೂರಸಂಪರ್ಕ ಇಲಾಖೆ (ಡಿಒಟಿ) ನಿರ್ಧರಿಸಿದೆ.
ದೂರಸಂಪರ್ಕ ಇಲಾಖೆಯು 2003ರಲ್ಲಿ 30 ವರ್ಷಗಳ ಚಾಲ್ತಿಯಲ್ಲಿರುವಂತೆ 10 ಡಿಜಿಟ್ ನಂಬರ್ಗಳ ಮೊಬೈಲ್ ಸಂಖ್ಯೆಗಳಿಗೆ ಅನುಮೋದನೆ ನೀಡಿತ್ತು. ಆದರೆ, ಗ್ರಾಹಕರ ಸಂಖ್ಯೆ ನಿರೀಕ್ಷೆಗೂ ಮೀರಿ ಬೆಳೆದಿದ್ದು, ತನ್ನ ನೀತಿಯನ್ನು ಪರಾಮರ್ಶಿಸಿ, 11 ಡಿಜಿಟರ್ ನಂಬರಿಂಗ್ ಸಿಸ್ಟಂಗೆ ಚಿಂತನೆ ನಡೆಸಿದೆ.
Discussion about this post