Read - 2 minutes
ಹೊಸದಿಲ್ಲಿ: ಇತ್ತೀಚೆಗೆ ನಡೆದ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಶಕ್ತಿ ಕೇಂದ್ರಿತ ಗುಂಪಿನ ದುರದ್ದೇಶಪೂರಿತ ರಾಜಕಾರಣ ಕುರಿತು ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿರುವ ಕೆಲವೇ ಕೆಲವು ಜನರನ್ನೊಳಗೊಂಡ ಗುಂಪಿನ ವರ್ತನೆಗಳನ್ನು ಬಹಿರಂಗಪಡಿಸಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿರುವ ದೇವೇಗೌಡರು, ಗ್ರಾಮೀಣ ಹಿನ್ನೆಲೆಯಿಂದ ಬಂದ ತಾವು ಅಧಿಕಾರಕ್ಕೆ ಬಂದ ಸಂದರ್ಭದಲ್ಲೂ ತಮ್ಮ ವಿರುದ್ಧ ಇದೇ ಗುಂಪಿನಿಂದ ಯೋಜಿತ ಪಿತೂರಿ ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ನಾನೂ ಕೂಡ ಈ ಹಿಂದೆ ಅದೇ ವರ್ಗದ ಪೂರ್ವಗ್ರಹಕ್ಕೆ ಬಲಿಪಶುವಾಗಿದ್ದವನು. ನಾನು ಸರಳ ಜೀವನಶೈಲಿ ಹೊಂದಿರುವ ಸರಳ ವ್ಯಕ್ತಿ. ನಾನು ಕ್ಲಬ್ ಕ್ಲಾಸ್ಗೆ ಸೇರಿದವನಲ್ಲ.ಇಂಥ ವ್ಯಕ್ತಿಗಳ ಮನರಂಜನೆಗೂ ನನ್ನಲ್ಲಿ ಆಸ್ಪದವಿಲ್ಲ ಎಂದು ನ್ಯೂಸ್ 18ಗೆ ನೀಡಿರುವ ಸಂದರ್ಶನಲ್ಲಿ ದೇವೇಗೌಡರು ಹೇಳಿದ್ದಾರೆ.
ಇತ್ತೀಚೆಗಷ್ಟೇ ನ್ಯೂಸ್ 18 ನಡೆಸಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ, ದೆಹಲಿಯಲ್ಲಿರುವ ಕೆಲವು ಶಕ್ತಿಗಳು ವಿವಿಧ ವರ್ಗ ಮತ್ತು ಹಿನ್ನೆಲೆಯಿಂದ ಬಂದ ಮಾಜಿ ಪ್ರಧಾನಿಗಳ ಬಗ್ಗೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಸದರ್ಾರ್ ಪಟೇಲ್, ಮೊರಾಜರ್ಿ ದೇಸಾಯಿ, ಚರಣ್ ಸಿಂಗ್ ಹಾಗೂ ನಾನು ಎಲ್ಲರೂ ವಿನಮ್ರ ಗ್ರಾಮೀಣ ಹಿನ್ನೆಲೆಯಿಂದ ಬಂದವರು. ನಮ್ಮ ಪಾಲಕರು ರೈತರು. ಆದರೆ ದೆಹಲಿಯ ಈ ಗುಂಪಿಗೆ ಇದನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರು ತುಳಿತಕ್ಕೊಳಗಾದ ಹಿನ್ನೆಲೆ ಮತ್ತು ಅತ್ಯಂತ ಬಡ ಕುಟುಂಬದಿಂದ ಬಂದವರು. ಆದರೆ ದೆಹಲಿಯ ಶಕ್ತಿ ಕೇಂದ್ರಿತ ರಾಜಕಾರಣ ಅವರನ್ನೂ ತೇಜೋವಧೆ ಮಾಡಿತು. ತಮ್ಮ ಸ್ನೇಹಿತ ಹಾಗೂ ಮಾಜಿ ಪ್ರಧಾನಿ ಚಂದ್ರಶೇಖರ್ಗೂ ಇಂಥದ್ದೇ ಅನುಭವಗಳಾಯಿತು. ಅವರನ್ನು ಎಲ್ಲರೂ ಗೇಲಿ ಮಾಡಿದರು ಎಂದು ದೇವೇಗೌಡರು ಹೇಳಿದ್ದಾರೆ.
ಮೋದಿ ಅವರ ಅಭಿಪ್ರಾಯವನ್ನು ನೋಡಿದ್ದೇನೆ. ಅವರು ಕಹಿ ಸತ್ಯವನ್ನೇ ಹೇಳಿದ್ದಾರೆ. ಅವರ ಹೇಳಿಕೆಯನ್ನು ನಾನು ಒಪ್ಪುತ್ತೇನೆ. ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ತಾವು ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದ ಕಾರಣಕ್ಕೆ ಇದೇ ದೆಹಲಿಯ ಗಣ್ಯ ಮತ್ತು ಶಕ್ತಿ ಕೇಂದ್ರಿತ ಗುಂಪು ತಮ್ಮ ವಿರುದ್ಧ ಕೆಲಸ ಮಾಡತೊಡಗಿದವು. ಇಂಥ ಕೀಳು ಸಂಸ್ಕೃತಿ ಕುರಿತು ಬಹಿರಂಗಪಡಿಸಿದ್ದಕ್ಕೆ ಪ್ರಧಾನಿಗಳಿಗೆ ಧನ್ಯವಾದ ತಿಳಿಸುವುದಾಗಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯ ಪವರ್ ಕಾರಿಡಾರ್ನಲ್ಲಿ ಕೆಲವೇ ಜನರ ಸುಪದರ್ಿಯಲ್ಲಿರುವ ಗುಂಪೊಂದು ವೈಯಕ್ತಿಕ ಲಾಭಕ್ಕಾಗಿ ಸದಾ ಸಕ್ರಿಯವಾಗಿದೆ. ಇದು ಕೇವಲ ಮೋದಿಗಷ್ಟೇ ಸೀಮಿತವಲ್ಲ. ಇತಿಹಾಸವನ್ನು ಹಿಂದಿರುಗಿ ನೋಡಿದರೆ, ಸದರ್ಾರ್ ಪಟೇಲ್ ಅವರಿಗೆ ಏನಾಯಿತು ಎಂಬುದು ತಿಳಿಯುತ್ತದೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಸದರ್ಾರ್ ಪಟೇಲ್ ಅವರನ್ನು ಇದೇ ಗುಂಪು ಸರಳ ಬುದ್ದಿಶಕ್ತಿಯವರೆಂದು ಬಿಂಬಿಸಿತ್ತು. ಮೊರಾಜರ್ಿ ದೇಸಾಯಿ ಅವರೂ ಕೂಡ ಇದಕ್ಕೆ ಹೊರತಾಗಲಿಲ್ಲ ಎಂದು ಮೋದಿ ಹೇಳಿದ್ದರು.
ಈ ಗುಂಪು ಪಟೇಲರ ಸಾಮಥ್ರ್ಯ, ಸಾಧನೆ ಕುರಿತು ಯಾವತ್ತಿಗೂ ಮಾತನಾಡಲಿಲ್ಲ. ಅನಗತ್ಯ ವಿಚಾರಗಳ ಬಗ್ಗೆಯೇ ಮಾತನಾಡತೊಡಗಿತ್ತು. ದೇವೇಗೌಡರ ವಿಚಾರದಲ್ಲಿ ಏನಾಯಿತು? ರೈತನ ಮಗನೊಬ್ಬ ಪ್ರಧಾನಿಯಾದಾಗ, ಅವರು ಯಾವಾಗಲೂ ನಿದ್ರಿಸುತ್ತಾರೆ ಎಂದು ಹೇಳಿತು. ಅಂಬೇಡ್ಕರ್, ಚೌಧುರಿ ಚರಣ್ ಸಿಂಗ್ ಅವರೂ ಇಂಥ ಟೀಕೆಗಳಿಗೆ ಹೊರತಾಗಲಿಲ್ಲ. ಈ ಕಾರಣಕ್ಕೆ ಈ ಗುಂಪಿನ ಕುರಿತು ನನಗೆ ಅಚ್ಚರಿಯಾಗಲಿಲ್ಲ. ನನ್ನ ಸಮಯವನ್ನು ಈ ಗುಂಪಿಗಾಗಿ ವ್ಯರ್ಥ ಮಾಡಿಕೊಳ್ಳಲು ನನಗೆ ಇಚ್ಛೆಯಿಲ್ಲ. ನೂರು ಕೋಟಿ ಜನರ ಕಲ್ಯಾಣ ನನ್ನ ಗುರಿ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದರು.
Discussion about this post