Read - < 1 minute
ನ್ಯೂಯಾರ್ಕ್ , ಸೆ.1: ಭಾರತದ ಸ್ಟಾರ್ಟೆನಿಸ್ ಆಟಗಾರರಾದ ಲಿಯಾಂಡರ್ ಪೇಸ್, ಸಾನಿಯಾ ಮಿರ್ಮಾ ಮತ್ತು ರೋಹನ್ ಬೋಪಣ್ಣ ಇಲ್ಲಿ ಆರಂಭವಾಗಿರುವ ಯುಎಸ್ ಓಪನ್ ಟೂರ್ನಿಯಲ್ಲಿ ಶುಭಾರಂಭ ಮಾಡಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಮಿಕ್ಸಡ್ ಡಬಲ್ಸ್ ಹಾಲಿ ಚಾಂಪಿಯನ್ಗಳಾದ ಪೇಸ್ ಮತ್ತು ಸ್ವಿಸ್ನ ಮಾರ್ಟಿನಾ ಹಿಂಗಿಸ್ ಅಮೆರಿಕಾದ ಸಾಚಿಯಾ ವಿಕೆರಿ, ಫ್ರಾನ್ಸ್ ನ ಯಾಫೊ ವಿರುದ್ಧ 51 ನಿಮಿಷಗಳ ಕಾಲ ಹೋರಾಟ ನಡೆಸಿ 6-3,6-2 ಅಂಕಗಳಿಂದ ಗೆದ್ದರು.
ಮಹಿಳಾ ಡಬಲ್ ನಲ್ಲಿ, ಏಳನೇ ಶ್ರಯಾಂಕಿತ ಜೋಡಿಯಾಗಿರುವ ಸಾನಿಯಾ ಮತ್ತು ಜಕ್ ನ ಜೊತೆಗಾರ್ತಿ ಬಾರ್ಬೋರಾ ಸ್ಟ್ರಿಕೊವಾ ಜೋಡಿಜಾಡಾ ಮೀ ಹಾರ್ಟ್ ಮತ್ತು ಎನಾ ಶಿಬಾಹಾರಾ ಜೋಡಿಯನ್ನು 6-3,6-2 ಅಂಕಗಳಿಂದ ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದರು.
Discussion about this post