ಬೆಂಗಳೂರು, ಆ.28- ಪಾಕ್ ಪರ ಹೇಳಿಕೆ, ಮಂಗಳೂರಿನಲ್ಲೂ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಮುಖಂಡೆ, ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಈಗ ತವರು ಜಿಲ್ಲೆಯಲ್ಲೂ ಅಪಸ್ವರ ಕೇಳಿಬಂದಿದೆ.
ವರ್ಷಕ್ಕೋ, ಆರು ತಿಂಗಳಿಗೋ ಒಮ್ಮೆ ಬಂದು ವಿವಾದಾತ್ಮಕ ಹೇಳಿಕೆ ನೀಡಿ ಜಿಲ್ಲಾ ಕಾಂಗ್ರೆಸ್ನಲ್ಲಿ ಗೊಂದಲ ಸೃಷ್ಟಿಮಾಡುತ್ತಿರುವ ಮಾಜಿ ಸಂಸದೆ, ಚಿತ್ರನಟಿ ರಮ್ಯಾ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಜಿಲ್ಲೆಯಲ್ಲಿ ಪಕ್ಷಕ್ಕೆ ಹಾನಿಯುಂಟುಮಾಡುತ್ತಿರುವ ರಮ್ಯಾ ಅವರು ನಮ್ಮ ಜಿಲ್ಲೆಗೆ ಅಗತ್ಯವಿಲ್ಲ ಎಂದು ಹಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಕಾಯರ್ಾಗಾರವೊಂದರಲ್ಲಿ ಭಾಗವಹಿಸಿ ಬಂದ ಸಂದರ್ಭದಲ್ಲಿ ನೀಡಿದ ಹೇಳಿಕೆ ಸರಿಯಿರಬಹುದು, ಇಲ್ಲದಿರಬಹುದು.ಆದರೆ, ಇದು ವಿವಾದ ಸೃಷ್ಟಿಸಿತು.ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಮುಜುಗರ ಉಂಟುಮಾಡಿತು.ಇದಲ್ಲದೆ, ಮಂಗಳೂರಿಗೆ ಭೇಟಿ ಮಾಡಿದ ಸಂದರ್ಭದಲ್ಲಿ ನೀಡಿದ ಹೇಳಿಕೆಯೂ ಕೂಡ ವಿವಾದಕ್ಕೀಡಾಯಿತು.
ಅವರ ಹೇಳಿಕೆಗಳ ಸಮರ್ಥನೆ, ಅಸಮರ್ಥನೆ ಬಗ್ಗೆ ಆರೋಪ-ಪ್ರತ್ಯಾರೋಪಗಳು ಕೇಳಿಬಂದವು.ಇದು ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ನ ಕೆಲ ಮುಖಂಡರು ಆರೋಪಿಸಿದ್ದಾರೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರಿಗೆ ಮತ್ತು ಕಾಯರ್ಾಧ್ಯಕ್ಷರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.ರಮ್ಯಾ ಅವರಿಗೆ ಎಐಸಿಸಿ ಮಟ್ಟದಲ್ಲಿ ಪ್ರಭಾವವಿರಬಹುದು. ಆದರೆ, ಅವರ ವಿವಾದಾತ್ಮಕ ಹೇಳಿಕೆಗಳಿಂದ ಸ್ಥಳೀಯ ಮಟ್ಟದ ನಾಯಕರುಗಳಿಗೆ ತೊಂದರೆಯಾಗುತ್ತದೆ.ಇದನ್ನು ಪಕ್ಷದ ವರಿಷ್ಠರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪರಿಹಾರ ನೀಡಲು ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿಯವರು ಆಗಮಿಸಿದಾಗ ಚೆಕ್ ವಿತರಿಸುವ ಸಂದರ್ಭದಲ್ಲಿಯೂ ಕೂಡ ವಿವಾದ ಉಂಟುಮಾಡಿದ್ದರು.
ಲೋಕಸಭೆ ಚುನಾವಣೆಯಲ್ಲಿ ಸೋತ ಮೇಲೆ ಮಂಡ್ಯದಲ್ಲಿ ಮನೆ ಖಾಲಿ ಮಾಡಿದ್ದರು.ಈಗ ಮತ್ತೆ ಮಂಡ್ಯದಲ್ಲಿ ನೆಲೆಸುವುದಾಗಿ ಬಂದು ಮನೆ ಮಾಡಿದ್ದಾರೆ.ಅವರ ಸ್ವಾತಂತ್ರ್ಯಕ್ಕೆ ನಾವು ಅಡ್ಡಿ ಮಾಡುವುದಿಲ್ಲ. ಆದರೆ, ಪಕ್ಷದ ಬೆಳವಣಿಗೆಗೆ ಅಡ್ಡಿಯಾಗುವಂತಹ ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ ಎಂದು ಕೆಲ ಹಿರಿಯ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಅವರ ಹೇಳಿಕೆಗಳನ್ನು ಪಕ್ಷವಾಗಿ ಒಂದು ಬಾರಿ, ಎರಡು ಬಾರಿ ಸಮಥರ್ಿಸಿಕೊಳ್ಳಬಹುದು.ಪದೇ ಪದೇ ಮರುಕಳಿಸಿದರೆ ಹೇಗೆ ಎಂಬುದು ಮಂಡ್ಯದ ಕೆಲ ಕಾಂಗ್ರೆಸಿಗರ ಆರೋಪವಾಗಿದೆ.
Discussion about this post