Read - < 1 minute
ಬೆಂಗಳೂರು, ಸೆ.20: ಸುಪ್ರೀಂಕೋರ್ಟ್ ಆದೇಶದ ಪ್ರತಿ ಇನ್ನೂ ಸಿಕ್ಕಿಲ್ಲ. ಆದೇಶ ಪ್ರತಿ ಪಡೆದು, ಸಂಪುಟ ಸಭೆಯಲ್ಲಿ ವಿಸ್ಕೃತ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶ ಹಿನ್ನಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶ ಕುರಿತು ಸಂಪುಟ ಸಭೆ ನಡೆಸಲಿದ್ದೇವೆ. ಸಭೆಯಲ್ಲಿ ಕಾನೂನು ಸಲಹೆ ಪಡೆದು ಮುಂದುನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ನಿನ್ನೆ ಮೇಲುಸ್ತುವಾರಿ ಸಮಿತಿ ಸೆ.21 ರಿಂದ 30 ರವರೆಗೆ 3 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ತೀರ್ಮಾನ ಮಾಡಿತ್ತು. ಸುಪ್ರೀಂಕೋರ್ಟ್ ಉಸ್ತುವಾರಿಗೆ ಸಭೆ ನಡೆಸಲು ಆದೇಶ ನೀಡಿತ್ತು. ಹಾಗಾಗಿ ಸೆ. 12 ಹಾಗೂ ಸೆ. 19 ರಂದು ಎರಡು ಸಭೆ ನಡೆಸಿತ್ತು. ಈ ಎರಡೂ ಸಭೆಯಲ್ಲಿ ಸುಧೀರ್ಘ ಚರ್ಚೆ ಮಾಡಿ, ಎರಡೂ ರಾಜ್ಯದ ವಾಸ್ತವ ಪರಿಸ್ಥಿತಿ ಅವಲೋಕಿಸಿ, ಅಂಕಿಅಂಶ ಪಡೆದು ನಿನ್ನೆ 3 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ತೀರ್ಮಾನಿಸಿತ್ತು.
ಆದರೆ ಸುಪ್ರೀಂಕೋರ್ಟ್ 6 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಹೇಳಿದೆ. ಅದರ ಜೊತೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರಕ್ಕೆ ಸೂಚನೆ ಕೊಟ್ಟಿದೆ. ಈ ಹಿನ್ನಲೆಯಲ್ಲಿ ನಾಳೆ ಸಂಪುಟ ಸಭೆ ಕರೆದಿದ್ದೇವೆ. ಈ ಬಗ್ಗೆ ಸಾದಕ-ಬಾದಕ ಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಕಾನೂನು ಸಲಹೆಯನ್ನು ಪಡೆದು ಮುಂದಿನ ಹೆಜ್ಜೆ ಇಡಲಿದ್ದೇವೆ.
ಪ್ರತಿಪಕ್ಷ ನಾಯಕರು, ಸಂಸದರು, ಎಲ್ಲಾ ಪಕ್ಷದ ಸದಸ್ಯರ ಸಭೆ ಕರೆದಿದ್ದೇವೆ, ನಮ್ಮಲ್ಲಿ ನೀರಿಲ್ಲ ಎಂಬುದನ್ನು ಮನವರಿಕೆ ಮಾಡಿದ್ದೇವೆ. ಈಗಿರುವ ನೀರು ಕುಡಿಯಲು ಬೇಕು ಎಂದು ಮೇಲುಸ್ತುವಾರಿ ಸಮಿತಿ ಹಾಗೂ ಸುಪ್ರೀಂಕೋರ್ಟ್ ಮುಂದೆಯೂ ಅಂಕಿಅಂಶಗಳ ಮೂಲಕ ಮನವರಿಕೆ ಮಾಡಿದ್ದರೂ, ಈ ರೀತಿಯ ಆದೇಶ ಬಂದಿದೆ ಎಂದು ಹೇಳಿದರು.
ಜನರಲ್ಲಿ ಮನವಿ:
ರಾಜ್ಯದ ಜನತೆ ಸೇರಿದಂತೆ ವಿಶೇಷವಾಗಿ ಕಾವೇರಿ ನದಿ ಪಾತ್ರದ ಜನರು ಶಾಂತಿಯುತವಾಗಿರಬೇಕು. ಆವೇಷಕ್ಕೆ ಹಾಗೂ ಉದ್ವೇಗಕ್ಕೆ ಒಳಗಾಗಬಾರದು. ಸಕರ್ಾರ ರಾಜ್ಯ ಹಾಗೂ ರೈತರ ಹಿತ ಕಾಪಾಡಲು ಬದ್ಧರಾಗಿದ್ದೇವೆ. ರೈತರು ಆತಂಕಕ್ಕೊಳಗಾಗಬಾರದು. ಎಲ್ಲರೂ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
Discussion about this post