ಉಡುಪಿ, ಸೆ.18: ರೈಲ್ವೇ ಇಲಾಖೆಯು ಸುರಕ್ಷತೆಗೆ ಎಷ್ಟು ಮಹತ್ವ ನೀಡುತ್ತಿದೆಯೋ, ಸ್ವಚ್ಛತೆಗೂ ಅಷ್ಟೇ ಒತ್ತು ನೀಡುತ್ತದೆ. ನಿಲ್ದಾಣದ ಹೊರಗೆ ಮತ್ತು ಒಳಗೆ ಸ್ವಚ್ಛತೆ ಕಾಪಾಡಲು ಸಂಘ ಸಂಸ್ಥೆಗಳು ಇಲಾಖೆಯ ಜೊತೆ ಸೇರಿಕೊಂಡಲ್ಲಿ ಪ್ರತಿಯೊಂದು ರೈಲ್ವೆ ನಿಲ್ದಾಣವನ್ನು ಅತ್ಯಾಕರ್ಷಕವನ್ನಾಗಿಸಬಹುದು ಎಂದು ಕೊಂಕಣ ರೈಲ್ವೆ ರೀಜನಲ್ ಸಿಗ್ನಲ್ ಟೆಲಿಕಮ್ಯೂನಿಕೇಷನ್ ಇಂಜಿನಿಯರ್ ಸಂತೋಷ್ ಶಿತುರ್ಕರ್ ಹೇಳಿದರು.
ಅವರು ಭಾರತೀಯ ರೈಲ್ವೆ ಇಲಾಖೆ ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಲಯನ್ಸ್ ಕ್ಲಬ್ ಸಂತೆಕಟ್ಟೆ ವತಿಯಿಂದ ಇಂದು ಉಡುಪಿ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ವಚ್ಚತಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಮನೋಭಾವ ಪ್ರತಿಯೊಬ್ಬ ರಲ್ಲಿ ಮೂಡಿದರೆ ಮಾತ್ರ ದೇಶ ಸ್ವಚ್ಛತೆಯೆಡೆಗೆ ವೇಗವಾಗಿ ಹೆಜ್ಜೆ ಇಡಲು ಸಾಧ್ಯ, ಪ್ರತಿ ವಾರದಲ್ಲಿ ದೇಶದ ಸ್ವಚ್ಛತೆಗಾಗಿ ಕನಿಷ್ಠ ಒಂದು ಘಂಟೆ ಸಮಯವನ್ನು ಮೀಸಲಿಟ್ಟರೆ ಸ್ವಚ್ಛ ಭಾರತ ಅಭಿಯಾನ ಪರಿಣಾಮಕಾರಿಯಾಗಲು ಸಾಧ್ಯ ಎಂದು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಹೇಳಿದರು.
ಸತೀಶ್ ಹೆಗ್ಡೆ, ರಮೇಶ್ ಶೆಟ್ಟಿ, ಲಯನ್ಸ್ ಕ್ಲಬ್ ಸಂತೆಕಟ್ಟೆ ಅಧ್ಯಕ್ಷೆ ಶಿಲ್ಪಾ ಸುದರ್ಶನ್, ಗುರುಬಸಪ್ಪ, ತಾರನಾಥ್, ಶಾಲಿನಿ ನಾಯಕ್, ಸುಷ್ಮಾ, ಸುದರ್ಶನ್ ನಾಯಕ್, ಮನೀಷ್ ಶೆಟ್ಟಿ, ಗಣೇಶ್ ನಾಯಕ್, ನಾಗರಾಜ್ ಭಂಡಾರ್ಕಾರ್, ದತ್ತಾತ್ರೇಯ ಕಿಣಿ, ಸಂತೋಷ್, ರೈಲ್ವೆ ಸಿಬಂಧಿಗಳು ಉಪಸ್ಥಿತರಿದ್ದರು. ರೈಲ್ವೆ ನಿಲ್ದಾಣದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಸ ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು.
Discussion about this post