Read - < 1 minute
ಹೈದ್ರಾಬಾದ್, ತೆಲಂಗಾಣ, ಸೆ.23- ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ವರುಣನ ಆರ್ಭಟಕ್ಕೆ ನಲುಗಿವೆ. 2ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, 13 ಜನರು ಬಲಿಯಾಗಿದ್ದಾರೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಮಳೆಯ ರುದ್ರ ನರ್ತನ ಅತಿಯಾಗಿದ್ದು, ಜನಜೀವನ ತತ್ತರಿಸಿದೆ. ಸಾವು ನೋವಿನ ಸಂಖ್ಯೆಯ ಏರುತ್ತಿದೆ.
ಬಿಸಿನಿಂದ ಕಂಗೆಟ್ಟಿದ ರಾಜ್ಯಗಳಲ್ಲಿ ಇದೀಗ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಜನರ ಕಣ್ಣಲ್ಲಿಯೂ ನೀರು ತರಿಸುತ್ತಿದೆ. ಮಳೆಯ ಪ್ರಮಾಣ ಹೆಚ್ಚುತ್ತಿರುವ ಪರಿಣಾಮ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಶಾಲಾ ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಸೇನಾಪಡೆಯನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಆಯಾ ರಾಜ್ಯದ ಮುಖ್ಯಮಂತ್ರಿಗಳು ತುತರ್ು ಕ್ರಮಗಳ ಬಗ್ಗೆ ಸೂಚನೆ ನೀಡಿದ್ದಾರೆ.
ತೆಲಂಗಾಣದಲ್ಲಿ ನಾಲ್ಕು ಬಲಿ
ತೆಲಂಗಾಣದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ 6 ಮಂದಿ ಗಾಯಗೊಂಡಿದ್ದಾರೆ.
ಮೇಡಕ್ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಅಧಿಕವಿದ್ದು, ಜನಜೀವನ ಸಂಪೂಣ ಅಸ್ತವ್ಯಸ್ತವಾಗಿದೆ. ನದಿಯಲ್ಲಿ ಓರ್ವ ವ್ಯಕ್ತಿ ತೇಲಿ ಹೋಗಿದ್ದು, ಓರ್ವ ವ್ಯಕ್ತಿ ಕಾರಿನಲ್ಲಿ ಸಿಲುಕಿ ಸೇತುವೆ ಮೇಲಿನಿಂದ ಕೊಚ್ಚಿ ಹೋಗಿದ್ದಾನೆ. ಕೋಲ್ಕೊಂಡ ಪ್ರದೇಶದಲ್ಲಿ ಮನೆಯೊಂದು ಕುಸಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಸದಸ್ಯರು ಮರಣ ಹೊಂದಿದ್ದಾರೆ.
ನಗರ ಪ್ರದೇಶಗಳಲ್ಲಿ ರಸ್ತೆಗಳೆಲ್ಲಾ ಸಾಗರೋಪಾದಿಯಲ್ಲಿ ಕಾಣಬರುತ್ತಿದ್ದು, ಜನರು ಮನೆಯಿಂದ ಅನವಶ್ಯಕ ಪ್ರಯಾಣ ಮಾಡದಂತೆ ಪೊಲೀಸರು ಸೂಚಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಆಂಧ್ರದಲ್ಲಿ 9 ಮಂದಿ ಸಾವು
ಆಂಧ್ರ ಪ್ರದೇಶದ ವಿವಿಧ ಜಿಲ್ಲೆಗಳು ವರುಣ ಮುನಿಸಿಗೆ ಬಲಿಯಾಗಿವೆ. ತಗ್ಗು ಪ್ರದೇಶಗಳು ನೀರಿನಿಂದಾವೃತವಾಗಿದ್ದು, ಸಂಪೂರ್ಣ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯ ಆರ್ಭಟಕ್ಕೆ ಆಂಧ್ರ ಪ್ರದೇಶಲ್ಲಿ 9 ಜನರು ಪ್ರಾಣ ಕಳೆದುಕೊಂಡಿದ್ದಾರೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಲ್ಲದೇ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದೆ. ಮಳೆಯಿಂದ ಹೊಲ,ಮನೆಗಳು ಕೊಚ್ಚಿ ಹೋಗಿವೆ. ಸತ್ತೇನಾ ಪಲ್ಲಿ ಪ್ರದೇಶವೊಂದರಲ್ಲಿ ಮನೆ ಕುಸಿದು 2 ವರ್ಷದ ಮಗುವೊಂದು ಬಲಿಯಾಗಿದೆ. ಗುಂಟೂರು ಜಿಲ್ಲೆಯಲ್ಲಿ ತೀವ್ರ ಮಳೆಯಿಂದುಂಟಾದ ಪ್ರವಾಹದಲ್ಲಿ ಓರ್ವ ವ್ಯಕ್ತಿ ಕೊಚ್ಚಿ ಹೋಗಿದ್ದಾನೆ. ಹೈದ್ರಾಬಾದ್ ನಗರದಲ್ಲಿ ಭಾರಿ ಮಳೆ ಸುಯರಿಯುತ್ತಿದ್ದು ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ ಶಾಲಾ ಕಾಲೇಜುಗಳಿಗೆ 2 ದಿನಗಳ ಕಾಲ ರಜೆ ಘೋಷಿಸಿದೆ. ರಾಜ್ಯ ಸಕರ್ಾರ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಭಾರತೀಯ ಸೇನೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ.
Discussion about this post