ಶಿವಮೊಗ್ಗ, ಆ. 31: ವಾಹನದಲ್ಲಿ ಗೋವು ಸಾಗಿಸುವಾಗ ಅದು ಕೆಳಗೆ ಬಿದ್ದರೂ ಲೆಕ್ಕಿಸದೇ ಎಳೆದುಕೊಂಡು ಹೋಗಿರುವ ಅಮಾನುಷ ಘಟನೆ ಹೊರವಲಯದ ನಿದಿಗೆ ಬಳಿ ನಡೆದಿದೆ.
ವಾಹನದಲ್ಲಿ ಹಲವಾರು ಗೋವುಗಳನ್ನು ನಿರ್ದಯವಾಗಿ ತುಂಬಿ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಈ ಸಾಗಾಟದ ವೇಳೆ ಆಯಾತಪ್ಪಿ ಹಸುವೊಂದು ಕೆಳಗೆ ಬಿದ್ದಿದೆ. ಆದರೆ ಇದರ ಪರಿವೇ ಇಲ್ಲದೇ ಚಾಲಕ ಮಾನವೀಯತೆ ಮರೆತು ಮುಂದೆ ಸಾಗಿದ್ದಾನೆ. ಗೋವನ್ನು ಸುಮಾರು ೨ ರಿಂದ ೩ ಕಿ.ಮೀ ಎಳೆದು ತಂದಿರುವ ಆತ, ಇದನ್ನು ಗಮನಿಸಿದ ಸ್ಥಳೀಯರು ವಾಹನ ನಿಲ್ಲಿಸಿದ್ದಾರೆ.
ಹಸುವಿನ ಸ್ಥಿತಿಕಂಡು ಕೆಂಡಾಮಂಡಲವಾದ ಗ್ರಾಮಸ್ಥರು ಚಾಲಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಿಂದ ಹಸುವಿನ ಒಂದು ಭಾಗ ಪೂರ್ಣ ಉಜ್ಜಿಹೋಗಿದ್ದು ಸಂಪೂರ್ಣ ನಿತ್ರಾಣಗೊಂಡಿದೆ. ಸ್ಥಳಕ್ಕೆ ತುಂಗಾನಗರ ಪೆಲೀಸರ ಭೇಟಿ ನೀಡಿ, ಹಸುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.
Discussion about this post