Read - < 1 minute
ಮಾರ್ಗರಿಟಾ, ಸೆ.16: ವಿಶೇಷ ವಿಮಾನದಲ್ಲಿ ಅಲಿಪ್ತ (ನಾಮ್) ಶೃಂಗಸಭೆಯಲ್ಲಿ ಪಾಲ್ಗೊಳ್ಳದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಭಾರತದ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಷಷ್ಟಪಡಿಸಿದ್ದಾರೆ.
ವೆನಿಜುವೆಲಾದ ಮಾರ್ಗರಿಟಾ ದ್ವೀಪದಲ್ಲಿ ನಡೆಯುವ 17ನೇ ಅಲಿಪ್ತ ಶೃಂಗಸಭೆಗೆ ಪ್ರಧಾನಿ ಮೋದಿ ಅವರ ಗೈರು ಹಾಜರಿಯಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿರುವ ಉಪ ರಾಷ್ಟ್ರಪತಿ ಅವರು ವಿಶೇಷ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಧಾನಿ ಅವರು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ. ಇದರಿಂದ ಯಾವ ಸಂದೇಶವನ್ನು ಭಾರತವು ರವಾನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತವು ಈ ಸಭೆಯಲ್ಲಿ ಪ್ರತಿನಿಧಿಸುತ್ತಿದೆ. ಇದು ಪ್ರಧಾನಮಂತ್ರಿಗಳ ಸಮಾವೇಶ ಅಲ್ಲ. ಹೀಗಾಗಿ ನಾವು ಭಾರತವನ್ನು ಪ್ರತಿನಿಧಿಸುತ್ತೇವೆ. ಭಾರತದ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅನ್ಸಾರಿ ಸ್ಪಷ್ಟಪಡಿಸಿದರು.
ಚರಣ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 1979ರಲ್ಲಿ ಆಲಿಪ್ತ ಶೃಂಗಸಭೆಗೆ ಗೈರು ಹಾಜರಾಗಿದ್ದರು. ಮೋದಿ ಈಗ ಈ ಸಭೆಗೆ ಚಕ್ಕರ್ ಹಾಕಿದ ಎರಡನೇ ಪ್ರಧಾನಿಯಾಗಿದ್ದಾರೆ.
Discussion about this post