ನವದೆಹಲಿ, ಆ.28-ರಾಜಧಾನಿಯ ಇಂದಿರಾಗಾಂಧಿಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡ 25 ಕೋಟಿರೂ.ಮೌಲ್ಯದ 80 ಕೆ.ಜಿ.ಚಿನ್ನ ನಿಗೂಢವಾಗಿಕಣ್ಮರೆಯಾಗಿದೆ. ಈ ಘಟನೆ ಬಗ್ಗೆ ಸಿಬಿಐ ತನಿಖೆಗೆಆದೇಶ ನೀಡಲು ಹಣಕಾಸು ಸಚಿವಾಲಯ ನಿರ್ಧರಿಸಿದೆ.
ದೆಹಲಿಯಐಜಿಐ ವಿಮಾನನಿಲ್ಡಾಣದ ಸೀಮಾಸುಂಕ ಗೋದಾಮಿನಿಂದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸ್ಮಗ್ಲರ್ಗಳಿಂದ ಜಪ್ತಿ ಮಾಡಲಾದಚಿನ್ನದ ಬಿಸ್ಕತ್ತುಗಳು, ಬಾರ್ಗಳು ಮತ್ತು ಆಭರಣಗಳು ನಾಪತ್ತೆಯಾಗಿವೆ. ಈ ಎಲ್ಲ ಪ್ರಕರಣಗಳಲ್ಲಿ ಕಣ್ಮರೆಯಾಗಿರುವ ಬಂಗಾರಗಳ ಬದಲು ಅಷ್ಟೇನು ಬೆಲೆ ಬಾಳದ ಹಳದಿ ಲೋಹವನ್ನು (ನಕಲಿ) ಇಡಲಾಗಿದೆಎಂದು ಮೂಲಗಳು ತಿಳಿಸಿವೆ.
ಅತಿ ಭದ್ರತೆಯಗೋದಾಮಿನಲ್ಲಿ ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನ ಬಂದದ್ದಾದರೂ ಹೇಗೆ ಎಂಬ ಬಗ್ಗೆ ಉನ್ನತಾಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.
ನಿಗೂಢವಾಗಿಕಣ್ಮರೆಯಾಗಿರುವ 80 ಕೆಜಿ ಬಂಗಾರದ ಮೌಲ್ಯ ಈಗಿನ ಚಿನಿವಾರ ಪೇಟೆಯಲ್ಲಿ 25 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯವಿದೆ.ಈ ಮೊದಲುದೆಹಲಿ ಪೊಲೀಸರುಚಿನ್ನ ನಾಪತ್ತೆ ಪ್ರಕರಣಗಳನ್ನು ವರದಿ ಮಾಡಿದ್ದರು.ಆದರೆಇದು ಮುಂದುವರಿದಿರುವುದರಿಂದ ಹಣಕಾಸು ಸಚಿವಅರುಣ್ಜೇಟ್ಲಿಅನುಮೋದನೆ ಮೇರೆಗೆ ಸಿಬಿಐ ತನಿಖೆ ನಡೆಸಲು ಹಣಕಾಸು ಸಚಿವಾಲಯವು ನಿರ್ಧರಿಸಿದೆ.
Discussion about this post