Read - < 1 minute
ಬೆಂಗಳೂರು: ಒಂದು ತಿಂಗಳ ಅಗತ್ಯ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಸೂಚನೆ ಇದ್ದರೂ ಮ್ಯಾರಾಥಾನ್ ಅಥ್ಲೀಟ್ ಒ.ಪಿ. ಜೈಶಾ ಮುಂದಿನ ವಾರವೇ ತರಬೇತಿ ಆರಂಭಿಸಲು ನಡೆಸಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ರಿಯೊ ಒಲಿಂಪಿಕ್ಸ್ ಕ್ರೀಡಾಕೂಟ ಮುಗಿಸಿ ವಾಪಸ್ ಬರುವಾಗ ಎಚ್1 ಎನ್1 ಸೋಂಕಿಗೆ ಗುರಿಯಾಗಿ ಬೆಂಗಳೂರಿನ ಫೋಟ್ರಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಜೈಶಾ ಚೇತರಿಸಿಕೊಂಡಿದ್ದಾರೆ. ವೈದ್ಯರು ಒಂದು ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ ಜೈಶಾ ಕೇರಳದ ವಯನಾಡ್ಜಿಲ್ಲೆಯ ಥ್ರಿಸ್ಸಿಲೆರಿ ಎಂಬ ಹಳ್ಳಿಯಲ್ಲಿ ಅಭ್ಯಾಸ ಮಾಡಲು ನಿರ್ಧರಿಸಿದ್ದಾರೆ. ಅಭ್ಯಾಸದ ಕುರಿತು ಜೈಶಾ ಆ.29ರಂದು ನಾನು ಬೆಂಗಳೂರಿನ ಆಸ್ಪತ್ರೆಯಿಂದ ಬಿಡುಗಡೆಗೊಂಡೆ. ನನ್ನ ಆರೋಗ್ಯ ಸುಧಾರಿಸಿದೆ. ಈ ಕಾರಣಕ್ಕಾಗಿ ಅಭ್ಯಾಸ ನಡೆಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
Discussion about this post