Read - < 1 minute
ಮೈಸೂರು, ಅ.13: ಜಂಬೂಸವಾರಿಗಾಗಿ ಒಂದೂವರೆ ತಿಂಗಳಿದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ಆನೆಗಳು, ಮಾವುತರು ಹಾಗೂ ಕಾವಾಡಿಗಳ ಕುಟುಂಬ ವಿಜಯದಶಮಿಯ ವಿಶೇಷ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿ ಬುಧವಾರ ವಿಶ್ರಾಂತಿ ಪಡೆದ ಘಟನೆ ಕಂಡು ಬಂದಿತು.
ಜಂಬೂ ಸವಾರಿಯನ್ನು ಸುಸೂತ್ರವಾಗಿ ಮುಗಿಸಿ, ಅರಮನೆ ಆವರಣದಲ್ಲಿ ಮಾವುತರು, ಕಾವಾಡಿಗರು ವಿರಾಮಿಸಿದರು. ಮಂಗಳವಾರ ನಡೆದ ಜಂಬೂಸವಾರಿಗಾಗಿ ಮುಂಜಾನೆಯಿಂದಲೇ ಆನೆಗಳೊಡನೆ ಕಾರ್ಯನಿರತರಾಗಿದ್ದ ಮಾವುತರು, ಕಾವಾಡಿಗಳು ಹಾಗೂ ಅರಮನೆ ಆವರಣದಲ್ಲಿ ಸಂಚಾರ ನಿರ್ಬಂಧ ಎದುರಿಸಿದ್ದ ಇವರ ಕುಟುಂಬದವರು ಬುಧವಾರ ತಮ್ಮ ತಾತ್ಕಾಲಿಕ ಟೆಂಟ್ ಬಳಿ ವಿಶ್ರಾಂತಿ ಮೂಡ್ನಲ್ಲಿ ಹರಟೆ, ಮಾತುಕತೆಯಲ್ಲಿ ತೊಡಗಿದ್ದ ದೃಶ್ಯಗಳು ಇಂದು ಕಂಡು ಬಂದವು.
ಒಟ್ಟಿನಲ್ಲಿ ಅರಮನೆ ಆವರಣದಲ್ಲಿ ಸತತ ಶ್ರಮ ಜೀವನ ನಡೆಸಿದ್ದ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬ ಮತ್ತು ಕೇಂದ್ರ ಆಕರ್ಷಣೆಯಾದ ಆನೆಗಳಿಗೆ ಬುಧವಾರ ಫುಲ್ ರೆಸ್ಟ್ ದೊರೆತ್ತಿದ್ದು, ಮತ್ತೆ ಯಾವಾಗ ತಮ್ಮ ಮೂಲ ಶಿಬಿರಗಳಿಗೆ ವಾಪಸಾಗುವ ದಿನ ಎಣಿಸುತ್ತಿರುವುದು ಕಂಡು ಬಂದಿತು.
ಇನ್ನು ಆನೆಗಳೂ ಸಹಾ ದೊಡ್ಡ ಕೆಲಸ ಮುಗಿಸಿದ ಸಮಾಧಾನವೇನೋ ಎಂಬಂತೆ ಸೊಂಡಿಲನ್ನು ಅತ್ತಿಂದಿತ್ತ ಆಡಿಸುತ್ತ, ಮಾವುತರು, ಕಾವಾಡಿಗಳು ನೀಡಿದ ಆಹಾರ ಸೇವಿಸುತ್ತ ನಿಂತಲ್ಲೇ ವಿಶ್ರಾಂತಿ ಪಡೆಯುತ್ತಿದ್ದವು.
Discussion about this post