Read - < 1 minute
ಪುಣೆ: ಅ:24: ನೃತ್ಯ ಮಾಡುತ್ತಿದ್ದಾಗಲೇ ವೇದಿಕೆ ಮೇಲೆ ಕುಸಿದುಬಿದ್ದು ಮರಾಠಿ ನಟಿ ಭರತನಾಟ್ಯ ಕಲಾವಿದೆ ಅಶ್ವಿನಿ ಏಕಬೋಟೆ (44) ಮೃತಪಟ್ಟಿದ್ದಾರೆ.
ಪುಣೆಯ ಭರತ ನಾಟ್ಯ ಮಂದಿರದಲ್ಲಿ ನೃತ್ಯ ಮಾಡುತ್ತಿದ್ದಾಗ, ಕುಸಿದುಬಿದ್ದರು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಮುನ್ನವೇ ಕೊನೆಯುಸಿರೆಳೆದಿದ್ದರು.
ರಾಷ್ಟ್ರೀಯ ಮಟ್ಟದಲ್ಲಿ ಭರತನಾಟ್ಯ ಕಲಾವಿದೆಯಾಗಿ ಅತಿ ಹೆಚ್ಚು ಖ್ಯಾತಿಯನ್ನು ಅಶ್ವಿನಿ ಗಳಿಸಿದ್ದರು. ಅಲ್ಲದೇ ಹಲವು ಮರಾಠಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ.
Discussion about this post