Read - < 1 minute
ಬೆಂಗಳೂರು, ಅ.19: ಬಳ್ಳಾರಿ ಗಣಿ ಉದ್ಯಮಿ ಮತ್ತು ಮಾಜಿ ಸಚಿವ ಜನಾರ್ಧನ ರೆಡ್ಡಿ ತಮ್ಮ ಮಗಳ ವಿವಾಹ ಆಮಂತ್ರಣ ಪತ್ರಿಕೆಯನ್ನು ವಿಶೇಷವಾಗಿ ರೂಪಿಸಿದ್ದು, ಆಮಂತ್ರಣ ಪತ್ರಿಕೆಯಲ್ಲೆ ಅದ್ಧೂರಿತನ ಮೆಳೈಸಿದೆ. ಆಮಂತ್ರಣದ ವಿಡಿಯೊ ಈಗ ಸಾಕಷ್ಟು ಜನಪ್ರಿಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜನಾರ್ಧನ ರೆಡ್ಡಿ ತಮ್ಮ ಮಗಳು ಬ್ರಾಹ್ಮಿಣಿಯ ಮದುವೆಯನ್ನು ಅದ್ದೂರಿಯಾಗಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಅದರ ಭಾಗವಾಗಿ ಈಗ ವಿಶಿಷ್ಟ ಕರೆಯೊಲೆಯನ್ನು ಸಿದ್ಧಪಡಿಸಿ ಆಪ್ತರಿಗೆ ನೀಡಿ ಮದುವೆಗೆ ಆಮಂತ್ರಣ ನೀಡಿದ್ದಾರೆ. ಆಮಂತ್ರಣ ಪತ್ರಿಕೆ ಒಂದು ಬಾಕ್ಸ್‌ನಲ್ಲಿದ್ದು, ಬಾಕ್ಸ್‌ನ ಒಳಭಾಗದಲ್ಲಿ ಒಂದು ಎಲ್‌ಇಡಿ ಸ್ಕ್ರಿನ್ ಅಳವಡಿಸಲಾಗಿದೆ. ಬಾಕ್ಸ್ ತೆರೆಯುತ್ತಿದ್ದಂತೆ ಎಲ್‌ಇಡಿ ಸ್ಕ್ರಿನ್‌ನಲ್ಲಿ ವಿಡಿಯೊ ಆಕರ್ಷಿಸುತ್ತದೆ. ಈ ವೀಡಿಯೊದಲ್ಲಿ ಜನಾರ್ಧನ ರೆಡ್ಡಿ ಮತ್ತು ಅವರ ಮಡದಿ ಅತಿಥಿ ದೇವೊ ಭವ ಎಂಬ ಹಾಡನ್ನು ಹಾಡುವ ಮೂಲಕ ವಿಶಿಷ್ಟವಾಗಿ ಮದುವೆಗೆ ಆಮಂತ್ರಣ ನೀಡುತ್ತಾರೆ.
ಜನಾರ್ಧನ ರೆಡ್ಡಿಯವರ ಮಗನೂ ಸಹ ಆಮಂತ್ರಣ ನೀಡುತ್ತಾರೆ. ನಂತರ ವಧು ಮತ್ತು ವರರನ್ನು ಬಾಲಿವುಡ್ ಶೈಲಿಯಲ್ಲಿ ವಿಶಿಷ್ಟವಾಗಿ ಪರಿಚಯಿಸಲಾಗುತ್ತದೆ. ಕೊನೆಯಲ್ಲಿ ಮದುವೆಯ ದಿನಾಂಕ ಮತ್ತು ಸ್ಥಳವನ್ನು ತೊರಿಸುವ ಮೂಲಕ ವೀಡಿಯೊ ಕೊನೆಗೊಳ್ಳುತ್ತದೆ.
ಜನಾರ್ಧನ ರೆಡ್ಡಿ ಮಗಳ ವಿವಾಹ ನವೆಂಬರ್ ೧೬ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
Discussion about this post