ರವಿ ಡಿ. ಚೆನ್ನಣ್ಣನವರ್ ಶಿವಮೊಗ್ಗ ಎಸ್ಪಿಯಾಗಿದ್ದ ವೇಳೆ ಅವರ ಭಯದಿಂದಲೇ ಹಲವು ಕ್ರಿಮಿನಲ್ಸ್‌ಗಳು ಊರು ತೊರೆದಿದ್ದರು. ಮತ್ತೆ ಕೆಲವರು ತಮ್ಮ ದುಷ್ಕೃತ್ಯಗಳಿಗೆ ತಾತ್ಕಾಲಿಕ ಕಡಿವಾಣ ಹಾಕಿದ್ದರು. ಇದು ನಾಗರಿಕರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಜೊತೆಗೆ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯವೈಖರಿಯು ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡಿತ್ತು. ಈಗಿನ ಎಸ್‌ಪಿಯವರು ಉತ್ತಮ ಹೆಸರು ಮಾಡಿದವರು. ಅವರು ಜಿಲ್ಲೆಯ ಕ್ರಿಮಿನಲ್‌ಗಳ ಬಗ್ಗೆ ಜಾಗೃತರಾಗಬೇಕಿದೆ. ಅಪರಾಧಿಗಳ ಪಟ್ಟಿಯನ್ನು ಗಮನಿಸಿ ಅವರು ಸದ್ಯ ಮಾಡುತ್ತಿರುವ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕಿದೆ.
ರಾಜೇಂದ್ರನಗರದಲ್ಲಿ ಮನೆ ದರೋಡೆಗೆ ವಿಫಲ ಯತ್ನ, ವಿವೇಕಾನಂದ ನಗರದಲ್ಲಿ ಮರುಕಳಿಸಿದ ಸರಗಳ್ಳತನ, ಜೆಪಿ ನಗರದಲ್ಲಿ ರಾತ್ರಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ, ಊರಗಡೂರಿನಲ್ಲಿ ಬೇರೆ ಬೇರೆ ಜಾತಿಯ ಯುವಕ-ಯುವತಿ ಒಟ್ಟಿಗೆ ಹೋಗುವಾಗ ಎಳೆದೊಯ್ದು ಕೆಲವು ಯುವಕರಿಂದ ಹಲ್ಲೆ…
ಇವು ಕಳೆದೊಂದು ವಾರದಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ನಡೆದ ಕ್ರಿಮಿನಲ್ ಚಟುವಟಿಕೆಗಳು. ಇವುಗಳನ್ನು ಗಮನಿಸಿದಾಗ ಮತ್ತೆ ಹಳೆ ಕ್ರಿಮಿನಲ್ಸ್ ಬಾಲ ಬಿಚ್ಚುತ್ತಿದ್ದಾರೆಯೇ ಅಥವಾ ಹೊಸಬರು ಕ್ರಿಮಿನಲ್ ಕೆಲಸಕ್ಕೆ ಕೈ ಹಾಕುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಎಸ್‌ಪಿ ಬದಲಾದ ನಂತರ ಈ ಬೆಳವಣಿಗೆ ಚಿಗಿತುಕೊಳ್ಳುತ್ತಿದೆಯೇ, ಪೊಲಿಸರು ಒಂದೇ ತಿಂಗಳಲ್ಲಿ ಹಿಂದಿನ ಬಿಗು ಕ್ರಮವನ್ನು ಮರೆತುಬಿಟ್ಟರೇ ಅಥವಾ ಕೈಬಿಟ್ಟರೇ ಎಂಬೆಲ್ಲ ಚಿಂತನೆಗಳು ಹರಿದಾಡಲಾರಂಭಿಸಿವೆ.
ಎಸ್‌ಪಿ ಆಗಿ ಅಭಿನವ್ ಖರೆ ಜಿಲ್ಲೆಗೆ ಬಂದ ನಂತರ ಇನ್ನೂ ಏಕೊ ಅವರು ಸದ್ದು ಮಾಡಲಾರಂಭಿಸಿಲ್ಲ. ಇದರಿಂದ ಇಂತಹ ಚಟುವಟಿಕೆ ಹೆಚ್ಚುತ್ತಿದೆಯೇ ಎಂಬ ಅನುಮಾನ ಜನರಲ್ಲಿ ಬರುವಂತಾಗಿದೆ. ಖರೆಯವರು ಸದ್ದಿಲ್ಲದೆ ಕೆಲಸ ಮಾಡುತ್ತಿರಬಹುದು. ಅದು ಅಪರಾಧಿಗಳಿಗೆ ಗೊತ್ತಾಗದೆಯೇ ಇದ್ದಿರಲೂಬಹುದು. ಆದರೆ ಯಶಸ್ವಿ ಗಣೇಶೋತ್ಸವ ಮೆರವಣಿಗೆಯನ್ನು ನಿರ್ವಹಿಸಿದ ನಂತರ ಎಸ್‌ಪಿಯವರ ಹೆಸರು ಎಲ್ಲೂ ಕೇಳಿಬರುತ್ತಿಲ್ಲ.
ಇದೇನೆ ಇರಲಿ, ಕೆಲವು ದಿನಗಳಿಂದ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ದಿಢೀರ್ ಆಗಿ ಅಪರಾಧ ಕೃತ್ಯಗಳು ಏರುಗತಿಯಲ್ಲಿ ಸಾಗುತ್ತಿವೆ. ವಿಶೇಷವಾಗಿ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ದುಷ್ಕೃತ್ಯಗಳಲ್ಲಿ ಕೆಲವು ಕಿಡಿಗೇಡಿಗಳು ನಿರಂತರವಾಗಿ ತೊಡಗುತ್ತಿರುವುದು ಕಂಡುಬರುತ್ತಿದೆ. ಹೆಚ್ಚುತ್ತಿರುವ ಕ್ರಿಮಿನಲ್ಸ್‌ಗಳ ಅಟ್ಟಹಾಸಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಫಲವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಪೊಲೀಸರ ಕಾರ್ಯವೈಖರಿಯ ಬಗ್ಗೆ ನಾಗರಿಕರು ಸಾಮಾಜಿಕ ಜಾಲತಾಣ ‘ವ್ಯಾಟ್ಸಾಪ್’ ಗ್ರೂಪ್‌ಗಳಲ್ಲಿ ಚರ್ಚೆ ನಡೆಸಲಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‌ಪಿ ಅಭಿನವ್ ಖರೆ ಕ್ರಿಮಿನಲ್ಸ್‌ಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ.
ರವಿ ಡಿ. ಚೆನ್ನಣ್ಣನವರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿದ್ದ ಸಂದರ್ಭದಲ್ಲಿ ಶಿವಮೊಗ್ಗ ನಗರ ಹಾಗೂ ಜಿಲ್ಲೆಯಾದ್ಯಂತ ರೌಡಿಸಂ, ಸರಗಳ್ಳತನ, ಮನೆಗಳ್ಳತನ, ದರೋಡೆ, ವಾಹನ ಕಳ್ಳತನ, ಯುವತಿಯರಿಗೆ ಕಿರುಕುಳ, ಹಫ್ತಾ ವಸೂಲಿ, ಸಮಾಜದ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟು ಮಾಡುವಂತಹ ದುಷ್ಕೃತ್ಯಗಳು ಸೇರಿದಂತೆ ನಾನಾ ರೀತಿಯ ಅಪರಾಧ ಕೃತ್ಯಗಳು ವಿಪರೀತ ಮಟ್ಟಕ್ಕೆ ತಲುಪಿತ್ತು. ಅದರಲ್ಲಿಯೂ ರಾಜಕೀಯ ಕೃಪಾಪೋಷಿತ ಕ್ರಿಮಿನಲ್ಸ್‌ಗಳ ಹಾವಳಿ ಹೇಳತೀರದಾಗಿತ್ತು. ಕ್ರಿಮಿನಲ್ಸ್‌ಗಳಿಗೆ ಪೊಲೀಸರ ಭಯವೇ ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ನಾಗರಿಕರು ಪೊಲೀಸ್ ಇಲಾಖೆಯ ಮೇಲಿದ್ದ ನಂಬಿಕೆಯನ್ನೇ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಚೆನ್ನಣ್ಣನವರ್ ತಮ್ಮ ನೇರ-ನಿರ್ಭೀಡ ಕಾರ್ಯವೈಖರಿಯ ಮೂಲಕ, ಸಿನಿಮೀಯ ಶೈಲಿಯಲ್ಲಿಯೇ ಕ್ರಿಮಿನಲ್ಸ್‌ಗಳನ್ನು ಸೆದೆಬಡಿಯುವ ಕೆಲಸ ಆರಂಭಿಸಿದರು. ತಾವೇ ಖುದ್ದಾಗಿ ನಾಗರಿಕರ ಅಹವಾಲು ಆಲಿಸಿ ಅಪರಾಧಿಗಳ ಬೆನ್ನು ಬಿದ್ದರು. ಮಾರುವೇಷದ ಕಾರ್ಯಾಚರಣೆ ನಡೆಸಿ ಕಾನೂನುಬಾಹಿರ ಕೃತ್ಯ ನಡೆಸುವವರ ಎದೆ ನಡುಗುವಂತೆ ಮಾಡಿದರು. ರಾತ್ರಿ-ಹಗಲು ಗಸ್ತು ವ್ಯವಸ್ಥೆ ಬಿಗಿಗೊಳಿಸಿದ್ದರು. ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ಸ್‌ಗಳಿಗೆ ಲಾಠಿ ಏಟು ಖಚಿತ ಎಂಬ ಭಯ ಹುಟ್ಟಿಸಿದರು. ಕಾನೂನುಬಾಹಿರ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದ, ಕ್ರಿಮಿನಲ್ಸ್‌ಗಳೊಂದಿಗೆ ಶಾಮೀಲಾಗಿದ್ದ ಇಲಾಖೆಯಲ್ಲಿದ್ದ ಭ್ರಷ್ಟ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳಿಗೂ ತಕ್ಕ ಶಾಸ್ತಿ ಮಾಡಿದರು. ಕಠಿಣ ಕ್ರಮಗಳಿಂದ ಸೀಮಿತಾವಧಿಯಲ್ಲಿಯೇ ಇಡೀ ಜಿಲ್ಲೆಯಲ್ಲಿ ಕ್ರೈಂ ಚಟುವಟಿಕೆಗಳು ತಹಬದಿಗೆ ಬಂದಿದ್ದವು.
ಚೆನ್ನಣ್ಣನವರ್ ಭಯದಿಂದಲೇ ಹಲವು ಕ್ರಿಮಿನಲ್ಸ್‌ಗಳು ಊರು ತೊರೆದಿದ್ದರು. ಮತ್ತೆ ಕೆಲವರು ತಮ್ಮ ದುಷ್ಕೃತ್ಯಗಳಿಗೆ ತಾತ್ಕಾಲಿಕ ಕಡಿವಾಣ ಹಾಕಿದ್ದರು. ಇದರಿಂದ ಸಮಾಜದಲ್ಲಿ ನೆಮ್ಮದಿಯ ವಾತಾವರಣ ನೆಲೆಸಿತ್ತು. ಇದು ನಾಗರಿಕರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಜೊತೆಗೆ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯವೈಖರಿಯು ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡಿತ್ತು.
ಈಗಿನ ಎಸ್‌ಪಿಯವರು ಉತ್ತಮ ಹೆಸರು ಮಾಡಿದವರು. ಅವರು ಜಿಲ್ಲೆಯ ಕ್ರಿಮಿನಲ್‌ಗಳ ಬಗ್ಗೆ ಜಾಗೃತರಾಗಬೇಕಿದೆ. ಅಪರಾಧಿಗಳ ಪಟ್ಟಿಯನ್ನು ಗಮನಿಸಿ ಅವರು ಸದ್ಯ ಮಾಡುತ್ತಿರುವ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕಿದೆ. ಹೊಸ ಕ್ರಿಮಿನಲ್‌ಗಳನ್ನು ಬಗ್ಗುಬಡಿಯುವ ಕೆಲಸ ಮಾಡಬೇಕಿದೆ. ತಮ್ಮ ಕೆಳಗಿನ ಅಧಿಕಾರಿಗಳು ಈ ಹಿಂದಿನಂತೆ ನಿರ್ಭಿಡತೆಯಿಂದ ಕೆಲಸ ಮಾಡಲು ಸೂಚಿಸಬೇಕಿದೆ. ಕೂಡಲೇ ಅಂತಹವರ ಬಗ್ಗೆ ಕ್ರಮ ಜರುಗಿಸುವತ್ತ ಮುಂದಡಿ ಇಡಬೇಕಿದೆ.
ಕೆಲವು ದಿನಗಳಿಂದ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ದಿಢೀರ್ ಆಗಿ ಅಪರಾಧ ಕೃತ್ಯಗಳು ಏರುಗತಿಯಲ್ಲಿ ಸಾಗುತ್ತಿವೆ. ವಿಶೇಷವಾಗಿ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ದುಷ್ಕೃತ್ಯಗಳಲ್ಲಿ ಕೆಲವು ಕಿಡಿಗೇಡಿಗಳು ನಿರಂತರವಾಗಿ ತೊಡಗುತ್ತಿರುವುದು ಕಂಡುಬರುತ್ತಿದೆ. ಹೆಚ್ಚುತ್ತಿರುವ ಕ್ರಿಮಿನಲ್ಸ್‌ಗಳ ಅಟ್ಟಹಾಸಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಫಲವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಪೊಲೀಸರ ಕಾರ್ಯವೈಖರಿಯ ಬಗ್ಗೆ ನಾಗರಿಕರು ಸಾಮಾಜಿಕ ಜಾಲತಾಣ ‘ವ್ಯಾಟ್ಸಾಪ್’ ಗ್ರೂಪ್‌ಗಳಲ್ಲಿ ಚರ್ಚೆ ನಡೆಸಲಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‌ಪಿ ಅಭಿನವ್ ಖರೆ ಕ್ರಿಮಿನಲ್ಸ್‌ಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ.
Discussion about this post