ನವದೆಹಲಿ, ಸೆ.20: ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿನ ಮೂರನೆಯ ಹಂತದ ನಗರಗಳನ್ನು ಕೇಂದ್ರ ಸರ್ಕಾರ ಇಂದು ಘೋಷಣೆ ಮಾಡಿದ್ದು, ರಾಜ್ಯ ನಾಲ್ಕು ನಗರಗಳು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿವೆ.
ಈ ಕುರಿತಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ದೇಶದ ಒಟ್ಟು 27 ನಗರಗಳು ಮೂರನೆಯ ಹಂತದಲ್ಲಿ ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿರುವ ಕುರಿತು ಪ್ರಕಟಿಸಿದರು.
ಪಂಜಾಬ್‌ನ ಅಮೃತಸರ ಅತಿ ಹೆಚ್ಚು ಅಂಕಗಳನ್ನು ಪಡೆದಿದೆ. ಉಳಿದಂತೆ ಒಟ್ಟು 27 ನಗರಗಳು ಈ ಪಟ್ಟಿಯಲ್ಲಿದ್ದು, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಶೌಚಾಲಯ, ಸ್ವಚ್ಛತೆ, ಘನತ್ಯಾವ್ಯ ವಿಲೇವಾರಿ, ಸಾರ್ವಜನಿಕ ಸಾರಿಗೆ ಉನ್ನತೀಕರಣ, ಮಾಹಿತಿ ಹಾಗೂ ತಂತ್ರಜ್ಞಾನ, ಇ-ಗವರ್ನೆನ್ಸ್ ಜಾರಿ ಸ್ಮಾರ್ಟ್ ಸಿಟಿಯಲ್ಲಿನ ಪ್ರಮುಖ ಕಾರ್ಯಗಳಾಗಿವೆ.
ಸ್ಮಾರ್ಟ್ ಸಿಟಿಯಾಗಲಿರುವ ನಗರಗಳು:
ಅಮೃತ್ ಸರ, ಕಲ್ಯಾಣ-ದೊಂಬೀವಿಲಿ, ಉಜ್ಜೈನಿ, ತಿರುಪತಿ, ನಾಗಪುರ್, .ಮಂಗಳೂರು, ವೆಲ್ಲೂರು, ಥಾಣೆ, ಗ್ವಾಲಿಯರ್, ಆಗ್ರಾ, ನಾಸಿಕ್, ರೌಕೇಲಾ, ಖಾನ್‌ಪುರ, ಮಧುರೈ, ತುಮಕೂರು, ಕೋಟಾ, ಶಿವಮೊಗ್ಗ, ಸೇಲಂ,ಅಜ್ಮೀರ್, ವಾರಣಾಸಿ, ಕೋಹಿಮಾ, ಹುಬ್ಬಳ್ಳಿ-ಧಾರವಾಡ, .ಔರಂಗಾಬಾದ್, ವಡೋದರಾ.
ಕೇಂದ್ರ ಸರ್ಕಾರ ಇಂದು ಪ್ರಕಟಿಸಿರುವ ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ನಗರಗಳ ಪಟ್ಟಿ:
Discussion about this post