ಉಡುಪಿ, ಸೆ.21: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಮೇಕ್ ಇನ್ ಇಂಡಿಯಾಗೆ ಪೂರಕವಾಗಿ ನಿವೇದನ್ ನೆಂಪೆ ಸಂಶೋಧಿಸಿ ಖ್ಯಾತಿಗಳಿಸಿದ ಅರೇಕಾ ಟೀ ಇನ್ನು ಮುಂದೆ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ.
ಅಕ್ಟೋಬರ್ 2 ರಂದು ಉಡುಪಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳು ಆನ್‌ಲೈನ್ ಮಾರಾಟಕ್ಕೆ ಚಾಲನೆ ನೀಡಲಿದ್ದಾರೆ.
ದಿನೇ ದಿನೇ ಆಡಿಕೆಗೆ ಬರುತ್ತಿರುವ ಕಷ್ಟಗಳೇ ಜಾಸ್ತಿ. ಅಡಿಕೆ ಬೆಳೆಗಾರರು ಸಂಕಷ್ಟದ ದಿನಗಳೆ ಮುಂದಿದೆ ಎಂದು ಬಾವಿಸಿರುವ ಜನಗಳಿಗೆ ಕಳೆದ ವರ್ಷ ಅಡಿಕೆಯಲ್ಲು ಚಹಾ ತಯಾರಿಸಬಹುದು ಎಂದು ಜಗತ್ತಿಗೆ ತೋರಿಸಿದ ನಿವೇದನ್ ಅದನ್ನು ನಂತರ ಮಾರುಕಟ್ಟೆಗೆ ತಂದಿದ್ದರು. ಇಡಿ ಜಗತ್ತೆ ಅಡಿಕೆ ಚಹಾಕ್ಕೆ ಬೆಂಬಲ ತೋರಿಸಿತ್ತು. ನಿವೇದನರ ದೇಶಪ್ರೇಮಕ್ಕೆ ಸಾಕ್ಷಿ ಎಂಬತ್ತೆ ತಮಗೆ ಬಂದ ಕೋಟಿಗಟ್ಟಲೆ ಆಫರ್ ತ್ಯಜಿಸಿ ಇದನ್ನು ಭಾರತಲ್ಲೆ ಉಳಿಸುತ್ತೇನೆ ಮತ್ತು ಬೆಳೆಸುತ್ತೇನೆ ಎಂದಿದ್ದರು ಅದರಂತೆ ಅದನ್ನು ಧರ್ಮಸ್ಥಳದ ಧರ್ಮಾಧಿಕಾರಿಯ ವೀರೇಂದ್ರ ಹೆಗ್ಡೆ ಬಿಡುಗಡೆ ಮಾಡಿದ್ದರು.
ನಂತರ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ ಸಾವಿರಾರು ಜನಗಳ ಆರೋಗ್ಯ ಸಮಸ್ಯೆ ದೂರ ಆಗಿದೆ. ಈಗಾಗಲೆ ಉತ್ತರ ಭಾರತದಲ್ಲಿ ಭಾರಿ ಭೇಡಿಕೆ ಬಂದಿದೆ. ಎರಡನೆಯ ತಯಾರಿಕಾ ಘಟಕವು ತಯಾರಿಕೆ ಆರಂಭಿಸಿದೆ. ಇದರಿಂದ ಅಡಿಕೆ ಬೆಳೆಗಾರರ ಸಂಕಷ್ಟ ಪರಿಹಾರ ಆಗುವುದೆ ಎಂದು ಭಾವಿಸಿದವರಿಗೆ ಉತರ ಸಿಗುತ್ತಿದೆ.
ಭಾರಿ ಭೇಡಿಕೆ ಬಂದಿರುವ ಕಾರಣದಿಂದ ಮಾರುಕಟ್ತೆಗೆ ಉತ್ಪನ್ನವನ್ನು ತಲುಪಿಸುವ ಕಾರಣದಿಣ್ದ ಸ್ವಲ್ಪ ಲೇಟ್ ಅಗಿದು ಎಂದು ಕಂಪನಿ ತಿಳಿಸಿದೆ. ಈಗಾಗಲೇ ಎರಡನೆಯ ಘಟಕ ಕಾರ್ಯಾರಂಭ ಮಾಡಿರುವುದರಿಂದ ಈಗ ಸಾಕಷ್ಟು ಉತ್ಪಾದನಾ ಸಾಮರ್ಥ್ಯಯ ಹೊಂದಿದೆ.
Discussion about this post