Read - < 1 minute
ನವದೆಹಲಿ, ಅ.5: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿ ಕುರಿತಂತೆ ಹೇಳಿಕೆ ನೀಡಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೇಲೆ ಮಸಿ ದಾಳಿ ನಡೆಸಲಾಗಿದೆ.
ರಾಜಾಸ್ತಾನ ಬಿಕನೇರ್‌ನಲ್ಲಿ ಕೇಜ್ರಿವಾಲ್ ಮೇಲೆ ಮಸಿ ದಾಳಿ ನಡೆಸಲಾಗಿದ್ದು, ಪಾಕ್ ಪರವಾಗಿ ಹೇಳಿಕೆ ನೀಡಿದ ಕೇಜ್ರಿಗೆ ಘೆರಾವ್ ಹಾಕಲಾಗಿದೆ. ಅಲ್ಲದೇ, ಮಸಿ ದಾಳಿ ಪೊಲೀಸರು ಹಾಗೂ ಮಾಧ್ಯಮದವರ ಮುಂದೆಯೇ ನಡೆದಿರುವುದು ಹುಬ್ಬೇರುವಂತೆ ಮಾಡಿದೆ.
ತಮ್ಮ ಮೇಲೆ ನಡೆದ ಮಸಿ ದಾಳಿ ಕುರಿತಂತೆ ಹೇಳಿಕೆ ನೀಡಿರುವ ಕೇಜ್ರಿವಾಲ್,ಮಸಿ ದಾಳಿ ನಡೆಸಿದವರಿದೆ ದೇವರು ಒಳ್ಳೆಯದು ಮಾಡಲಿ. ಚೆನ್ನಾಗಿರಲಿ ಎಂದು ಆಶಿಸುತ್ತೇನೆ. ನನ್ನ ಹೇಳಿಕೆಗೆ ಬಿಜೆಪಿ ಯಾಕೆ ಹೆದರುತ್ತಿದೆ. ಸೀಮಿತ ದಾಳಿಯೇ ನಡೆದಿಲ್ಲ ಎಂದು ಭಾರತದ ವಿರುದ್ಧ ತಪ್ಪು ಪ್ರಚಾರ ಮಾಡುತ್ತಿರುವ ಪಾಕಿಸ್ಥಾನಕ್ಕೆ ಸರಿಯಾದ ಉತ್ತರ ನೀಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹೇಳಿದ್ದೆ ಅಷ್ಟೆ. ಸೀಮಿತ ದಾಳಿ ನಡೆದಿರುವ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಹೇಳಿದ್ದಾರೆ.
ಕೇಜ್ರಿಗೆ ಹಜಾರೆ ತರಾಟೆ
ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ನೀಡುವಂತೆ ಆಗ್ರಹಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತೀಯ ಸೇನೆ ವಿರುದ್ಧದ ಕೇಜ್ರಿವಾಲ್ ಅವರ ವಿವಾದಾತ್ಮಕ ಹೇಳಿಕೆಯನ್ನು ಅಣ್ಣಾ ಹಜಾರೆ ತೀವ್ರವಾಗಿ ಖಂಡಿಸಿದ್ದು, ಸೇನೆ ಮೇಲೆ ಯಾರು ಅನುಮಾನ ಪಡುವುದಿಲ್ಲ. ಭಾರತೀಯ ಸೇನೆಯ ಮೇಲೆ ಮಕ್ಕಳಿಂದ ಹಿರಿಯರವರೆಗೆ ಗೌರವ ಮತ್ತು ಭರವಸೆ ಇದೆ ಎಂದು ಹೇಳಿದ್ದಾರೆ.
Discussion about this post