Read - < 1 minute
ಮಣಿಪಾಲ, ಆ.28: ಶಿಕ್ಷಣ ಕಾಶಿ ಎಂದು ಹೆಸರಾಗಿರುವ ಮಣಿಪಾಲದಲ್ಲಿರುವ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ನ ಉಪಪ್ರಾಂಶುಪಾಲರು ತನ್ನ ಮಹಿಳಾ ಸಹುದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿನ ಘಟನೆ ನಡೆದಿದ್ದು, ಆತನನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.
ಅದೇ ಕಾಲೇಜಿನ ಹಳೆವಿದ್ಯಾರ್ಥಿಯೂ ಆಗಿರುವ ಉಪಪ್ರಾಂಶುಪಾಲ ಶ್ರೀಕಾಂತ ಪೈ ಅವರು ಕಂಪ್ಯೂಟರ್ ಸಾಯನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ, ಶವಿವಾರ ಅದೇ ವಿಭಾಗದ ಪ್ರಾಧ್ಯಾಪಕಿಯ ಮೈಮೇಲೆ ಕೈ ಹಾಕುವುದಕ್ಕೆ ಪ್ರಯತ್ನಿಸಿದ್ದು, ಈ ಬಗ್ಗೆ ವಿವಾಹಿತ ಉಪನ್ಯಾಸಕಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೋಮವಾರ ಈ ವಿಷಯ ಬಹಿರಂಗವಾಗುತ್ತಿದ್ದಂತೆ ಕಾಲೇಜು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ, ಧಿಡೀರ್ ಮುಷ್ಕರ ನಡೆಸಿ, ಉಪಪ್ರಾಂಶುಪಾಲರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಶನಿವಾರ ಉಪನ್ಯಾಸಕಿ ಈ ಬಗ್ಗೆ ತನ್ನ ಗಂಡನಿಗೆ ತಿಳಿಸಿದ್ದು, ಅವರು ಕಾಲೇಜಿನ ಪ್ರಾಂಶುಪಾಲರಿಗೆ ಭಾನುವಾರ ದೂರು ನೀಡಿದ್ದರು. ಪ್ರಾಂಶುಪಾಲರು ಸೋಮವಾರ ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. ನಂತರ ಸಾಕಷ್ಟು ಸಮಾಲೋಚನೆಯ ನಂತರ ಕಾಲೇಜಿನ ಆಡಳಿತ ಮಂಡಳಿ, ಕಾಲೇಜಿನ ದೌರ್ಜನ್ಯ ತಡೆ ಸಮಿತಿಯಿಂದ ತನಿಖೆ ನಡೆಸುವುದು ಮತ್ತುಅಲ್ಲಿವರೆಗೆ ಆರೋಪಿ ಉಪಪ್ರಾಂಶುಪಾಲರನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದೆ ಎಂದು ಸಂಸ್ಥೆಯ ಉಸ್ತುವಾರಿ ಟಿ.ರಂಗ ಪೈ ಮಾಧ್ಯಮಗಳಿಗೆ ತಿಳಿಸಿದರು.
ಆರೋಪಿ ಉಪಪ್ರಾಂಶುಪಾಲ ಅನೇಕ ಸಮಯದಿಂದ ಪ್ರಾಧ್ಯಾಪಕಿಯ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ, ಮೊಬೈಲ್ ಮೆಸೇಜುಗಳನ್ನು ಕಳುಹಿಸುತ್ತಿದ್ದ, ಆಕೆಯೊಂದಿಗೆ ಅನಪೇಕ್ಷಿತ ಮಾತುಗಳನ್ನಾಡುತ್ತಿದ್ದ ಎಂದು ರಂಗ ಪೈ ತಿಳಿಸಿದ್ದಾರೆ.
ಆದರೇ ಉಪಪ್ರಾಂಶುಪಾಲರ ಮೇಲೆ ಈ ಹಿಂದೆಯೂ ಇಂತಹ ಆರೋಪಗಳಿದ್ದವು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ವಿಚಿತ್ರ ಎಂದರೇ ಕೆಲವು ವಿದ್ಯಾರ್ಥಿನಿಯರು ಸಂತ್ರಸ್ಥೆ ಉಪನ್ಯಾಸಕಿಯನ್ನೂ ಅಮಾನತುಗೊಳಿಸಬೇಕು ಎಂದು ಜೋರಾಗಿ ಆಗ್ರಹಿಸುತ್ತಿದ್ದುದು ಕೂಡ ಕೇಳಿಬಂತು.

Discussion about this post