ಸಾಗರ, ಸೆ.2: ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ಭಾರತೀಯ ಶಿಕ್ಷಣ ಸಂಸ್ಕೃತಿ ಪ್ರತಿಷ್ಟಾನಂ ವತಿಯಿಂದ ಗಣೇಶೋತ್ಸವ ನಡೆಸುವ ಸಂಘಸಂಸ್ಥೆಗಳಿಗೆ ವಿಶೇಷ ಸ್ಪರ್ಧೆ ಆಯೋಜಿಸಲಾಗಿದೆ.
ಗಣಪತಿ ಮೂರ್ತಿಯ ವೈಶಿಷ್ಟ್ಯತೆ, ಪರಿಸರಸ್ನೇಹಿ, ಅಲಂಕಾರ, ಶ್ರದ್ಧಾಭಕ್ತಿಯ ಪೂಜಾಕಾರ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಪರಿಸರ ಸ್ವಚ್ಛತೆ, ಶಿಸ್ತುಬದ್ದವಾಗಿರುವ ಸಮಿತಿ, ಗಣಪತಿ ವಿಸರ್ಜನಾ ಮೆರವಣಿಗೆ, ಶಬ್ದ ಹಾಗೂ ಪರಿಸರ ಮಾಲಿನ್ಯ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ನಿಯಮಾವಳಿ ಪಾಲಿಸುವ ಗಣೇಶೋತ್ಸವ ಆಚರಣಾ ಸಮಿತಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ.
ಪ್ರಥಮ ಬಹುಮಾನ 7ಸಾವಿರ ರೂ., ದ್ವಿತೀಯ ಬಹುಮಾನ 5 ಸಾವಿರ ರೂ. ಹಾಗೂ ತೃತೀಯ ಬಹುಮಾನ 3 ಸಾವಿರ ರೂ. ನಗದು ನೀಡಲಾಗುತ್ತದೆ.
ಸಮಾಜದ ಬೇರೆಬೇರೆ ಸ್ತರದಲ್ಲಿನ ವ್ಯಕ್ತಿಗಳಿಂದ ಸಮೀಕ್ಷೆ ಮಾಡಿಸಿ, ಮಾಹಿತಿ ಸಂಗ್ರಹಿಸಿ ಬಹುಮಾನ ವಿತರಣೆ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಗಣೇಶೋತ್ಸವ ಸಮಿತಿಗಳು ಸೆ. 4ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ಅರ್ಜಿಯನ್ನು ಡಿಲಕ್ಸ್ ರೋಡ್‌ಲೈನ್ಸ್, ಬಸವಣ್ಣ ದೇವಸ್ಥಾನ ಪಕ್ಕ, ಕಾನ್ಲೆ ಛತ್ರದ ಎದುರು, ಜೆಸಿ ರಸ್ತೆ, ಸಾಗರ ಇವರಿಗೆ ಸಲ್ಲಿಸಬಹುದು.
ಬಾಕ್ಸ್
ಹೆಚ್ಚಿನ ವಿವರಗಳಿಗೆ ಸುರೇಶ್ ಬಜರಂಗದಳ (ಮೊ.9972025553), ಐ.ವಿ.ಹೆಗಡೆ ವಿಶ್ವಹಿಂದೂ ಪರಿಷತ್ (ಮೊ.9448218757), ನಾರಾಯಣಮೂರ್ತಿ ಭಾರತೀಯ ಶಿಕ್ಷಣ ಸಂಸ್ಕೃತಿ ಪ್ರತಿಷ್ಟಾನಂ (ಮೊ.9481255902) ಇವರನ್ನು ಸಂಪರ್ಕಿಸಬಹುದು.
Discussion about this post