ನವದೆಹಲಿ, ಸೆ.4: ಭಾರತ-ಪಾಕಿಸ್ಥಾನ ನಡುವಿನ ವಿವಾದದ ಬೆನ್ನಲ್ಲೆ ಸೆ.೨೯ರಂದು ಭಾರತ ನಡೆಸಿದ ಸೀಮಿತ ದಾಳಿಯ ಹಿಂದಿನ ತಂತ್ರಗಾರಿಕೆ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರದ್ದು ಎಂಬ ಅಂಶ ಇದೀಗ ಕುತೂಹಲವನ್ನು ಮೂಡಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಗಡಿಯಲ್ಲಿ ನುಗ್ಗಿದ ಭಾರತೀಯ ಯೋಧರು, 38 ಉಗ್ರರನ್ನು ಭೇಟೆಯಾಡಿದ್ದರು. ಈ ಬೆಳವಣಿಗೆ ಇಡೀ ವಿಶ್ವದಲ್ಲಿ ತೀವ್ರ ಸಂಚಲನವನ್ನು ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಈ ವಿಚಾರ ಹಲವು ಮಜಲುಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಎರಡು ವರ್ಷಗಳ ಹಿಂದೆ ಮಾತನಾಡಿದ್ದ ಅಜಿತ್ ಧೋವಲ್, ಇನ್ನೂ ಒಂದು ಮುಂಬೈ ಮಾಡಿ, ನೀವು ಬಲೂಚಿಸ್ತಾನವನ್ನು ಕಳೆದುಕೊಳ್ಳಬಹುದು ಎಂದು ಪಾಕಿಸ್ಥಾನಕ್ಕೆ ಸಂದೇಶ ರವಾನಿಸಿದ್ದರು. ಆದರೆ, ಧೋವಲ್ ಮಾತಿನ ಹಿಂದಿನ ಮರ್ಮ ಯಾರಿಗೂ ತಿಳಿದಿರಲಿಲ್ಲ. ಆದರೆ, ಭಯೋತ್ಪಾದಕರು ಹಾಗೂ ಅವರಿಗೆ ಸಹಕರಿಸುವ ದೇಶಗಳ ವಿರುದ್ಧ ನಾವು ವ್ಯೆಹಾತ್ಮಕವಾಗಿ ತಂತ್ರಗಾರಿಕೆ ಹೆಣೆಯುತ್ತೇವೆ ಎಂಬ ಸಂದೇಶವನ್ನು ರವಾನಿಸಿದ್ದರು. ಈಗ, ಗಡಿಯಲ್ಲಿ ನುಗ್ಗಿ 38 ಉಗ್ರರನ್ನು ಸದೆಬಡಿದ ಕಾರ್ಯಾಚರಣೆ ಮೂಲಕ ಧೋವಲ್ ನೀಡಿದ್ದ ಸಂದೇಶ ಅರ್ಥವನ್ನು ಪಡೆದುಕೊಂಡಿದೆ.
೨೦೧೪ರಲ್ಲಿ ಮತನಾಡಿದ್ದ ಧೋವಲ್, ಭಾರತ ತನ್ನ ವ್ಯೆಹಗಾರಿಕೆಯನ್ನು ಬದಲಿಸುವ ಬಗ್ಗೆ ಪರಿಶೀಲನೆ ನಡೆಸಿತ್ತೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲಿಯವರೆಗೂ ಭಾರತ ಭಯೊತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಚೌಕಿದಾರರ ಪಾತ್ರ ವಹಿಸುತ್ತಾ ಬಂದಿತ್ತು. ಅಂದರೆ ಕೇವಲ ರಕ್ಷಣಾತ್ಮಕ ನೀತಿ ಪಾಲಿಸುತ್ತಾ ಬಂದಿದೆ ಎಂದಿದ್ದರು.
ಆದರೆ ಆ ಬಳಿಕ ಭಾರತ ತನ್ನ ನೀತಿಯನ್ನು ಬದಲಿಸುವ ಗಂಭೀರ ಚಿಂತನೆ ಮಾಡಿತು. ಅಣ್ವಸ್ತ್ರ ಸಮರ ಸಾಧ್ಯತೆಯ ಹಿನ್ನೆಲೆಯಲ್ಲಿ ವೈರಿಯ ಮೆಲೆೆ ನೇರ ದಾಳಿ ನಡೆಸುವ ಬದಲಿಗೆ ರಕ್ಷಣಾತ್ಮಕ ದಾಳಿ ಅಂದರೆ ಯಾವ ಸ್ಥಳದಿಂದ ದಾಳಿ ನಡೆಯುತ್ತಿದೆಯೋ ಆ ಸ್ಥಳವನ್ನೇ ಗುರಿಯಿಟ್ಟು ದಾಳಿ ನಡೆಸುವ ಬಗ್ಗೆ ಚಿಂತಿಸಿತು. ಜಮ್ಮು ಮತ್ತು ಕಾಶ್ಮಿರದಲ್ಲಿ ಗಡಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ನುಗ್ಗಿ ದಾಳಿ ನಡೆಸಿದ ಸೆ. 29ರ ಸೀಮಿತ ದಾಳಿ ಕಾರ್ಯಾಚರಣೆ ಈ ನೀತಿ ಸರಿಯಾದ ಉದಾಹರಣೆ.
ಭಾರತದ ವ್ಯೆಹಾತ್ಮಕ ತಂತ್ರಗಾರಿಕೆಯ ಕುರಿತಾಗಿ ಯೋಚನೆಗಳ ಮುನ್ಸೂಚನೆಯನ್ನು ನೀಡಿದ್ದ ಧೋವಲ್, ಶತ್ರುಗಳಿಗೆ ಅಂದೇ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಇದರಲ್ಲಿ ಅಣ್ವಸ್ತ್ರ ಸಮರದ ಪ್ರಶ್ನೆ ಇಲ್ಲ. ಪಡೆಗಳ ಪಾಲ್ಗೊಳ್ಳುವಿಕೆಯೂ ಇಲ್ಲ. ಅವರಿಗೆ ಉಪಾಯಗಳು ಗೊತ್ತಿವೆ. ನಮಗೆ ಅವರಿಗಿಂತ ಹೆಚ್ಚಿನ ಉಪಾಯಗಳು ಗೊತ್ತಿವೆ ಎಂದಿದ್ದರು. ಉರಿ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಸೆ. 28-29ರ ನಡುರಾತ್ರಿಯಲ್ಲಿ ಸೀಮಿತ ದಾಳಿ ನಡೆಸಿದ ಭಾರತ 38 ಉಗ್ರಗಾಮಿಗಳನ್ನು ಕೊಂದು ಹಾಕಿದ್ದು ಇದೇ ನೀತಿಯ ಅಡಿಯಲ್ಲಿ ಎಂಬುದು ಗಮನಾರ್ಹ.
Discussion about this post