ಮೈಸೂರು: ಸೆ:26; ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ಯಾವುದೇ ರೀತಿಯ ತೀರ್ಪು ನೀಡಿದರೂ ಜನತೆ ತಾಳ್ಮೆ ಕಳೆದು ಕೊಳ್ಳಬಾರದು ಎಂದು ಮೈಸೂರಿನಲ್ಲಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾನಾಡಿ, ಕಾವೇರಿ ಹೋರಾಟದ ವಿಚಾರದಲ್ಲಿ ಮುಂದೆ ಯಾರಾದರೂ ಬಂದ್ ಗೆ ಕರೆ ನೀಡಿದರೆ, ಅದರಿಂದಾಗುವ ನಷ್ಟಕ್ಕೆ ಅವರನ್ನೇ ಹೊಣೆಗಾರರನ್ನಾಗಿಸುವುದಾಗಿ ಎಚ್ಚರಿಕೆ ನೀಡಿದರು. ಸರ್ಕಾರಿ ಕಚೇರಿಗಳನ್ನು ಮುಚ್ಚಿಸಿದರೆ, ಬಸ್ ಗಳ ಸಂಚಾರಕ್ಕೆ ತಡೆಯೊಡ್ಡಿದರೆ ಯಾರಿಗೆ ನಷ್ಟವಾಗುತ್ತದೆ ಎಂದು ಪ್ರಶ್ನಿಸಿದರು.
ಕಾವೇರಿ ಹೋರಾಟಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಬಲವಂತವಾಗಿ ಕರೆತರಬಾರದು. ವಿದ್ಯಾರ್ಥಿಗಳು ಕೂಡ ಪ್ರಚೋದನೆಗೆ ಒಳಗಾಗದಂತೆ ವಿನಂತಿಸಿದರು.
ಈಗಾಗಲೇ ಕೆಲವರ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.ಸುಪ್ರೀಂ ಕೋರ್ಟ್ ತೀರ್ಪುಏನೇ ಬರಲಿ, ಹೋರಾಟಗಾರರು ಸಾರ್ವಜನಿಕರಿಗೆ ತೊಂದರೆಯಾಗದಂತೆ ತಮ್ಮ ಪ್ರತಿಭಟನೆ ವ್ಯಕ್ತಪಡಿಸಬೇಕು.
ರಾಜ್ಯದ ಜನರ ಭಾವನೆ ಇಡೀ ಸರ್ಕಾರ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
ಸುಪ್ರೀಂ ಕೋರ್ಟ್ ಯಾವುದೇ ರೀತಿಯ ತೀರ್ಪು ನೀಡಿದರೂ ಸರ್ಕಾರ ಅದನ್ನು ಸಮರ್ಥವಾಗಿ ಎದುರಿಸಲಿದೆ. ಹೊರಾರಾಜ್ಯಗಳಿಂದ ಬಂದು ಕನರ್ಾಟಕದಲ್ಲಿ ನೆಲೆಸಿರುವವರೆಲ್ಲಾ ಭಾರತೀಯರೇ ಆಗಿದ್ದಾರೆ. ಹೀಗಾಗಿ ಯಾರು ಕೂಡ ಅವರಿಗೆ ತೊಂದರೆ ಕೊಡಬೇಡಿ,
ಅನ್ಯರಾಜ್ಯಗಳಿಗೆ ಸೇರಿದ ವಾಹನಗಳ ಮೇಲೆ, ಆಸ್ತಿಗಳ ಮೇಲೆ ದಾಳಿ ನಡೆಸಬೇಡಿ ಎಂದು ಕರೆ ನೀಡಿದರು.
ಖಾಲಿ ಹುದ್ದೆಗಳ ಭರ್ತಿ
ಇಂಧನ ಇಲಾಖೆಯಲ್ಲಿರುವ ಎಲ್ಲಾ ಹುದ್ದೆಗಳನ್ನು ಮುಂದಿನ ಐದಾರು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು
ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುವುದು. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಒಂದೇ ಹಂತದಲ್ಲಿ ಭರ್ತಿ ಮಾಡಲಾಗುವುದೆಂದು ಹೇಳಿದರು.
Discussion about this post