Read - < 1 minute
ಬೆಂಗಳೂರು, ಆ.31: ನಗರದ ಗವಿಪುರದ ಶ್ರೀ ಪ್ರಸನ್ನ ಪಾರ್ವತಿ ಸಮೇತ ಜಲಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಸೆ.6ರಿಂದ 8ರವರೆಗೆ ಕುಂಬಾಭಿಷೇಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ದುರ್ಮುಖಿ ನಾಮ ಸಂವತ್ಸರ ಭಾದ್ರಪಾದ ಶುಕ್ಲ ಸಪ್ತಮಿ ಸೆ.8ರಂದು ಬೆಳಗ್ಗೆ 11ರಿಂದ 12 ಗಂಟೆಯೊಳಗೆ ಸಲ್ಲುವ ಶುಭ ಅಭಿಜಿತ್ ಮುಹೂರ್ತದಲ್ಲಿ ಜೀರ್ಣೋದ್ಧಾರ ಮತ್ತಿತರ ಕಾರ್ಯಕ್ರಮ ಜರುಗಲಿದೆ.
ಅದಕ್ಕೂ ಮುನ್ನ 6ರಂದು ಬೆಳಗ್ಗೆ 8 ಗಂಟೆಗೆ ಪುಣ್ಯ ಕ್ಷೇತ್ರ ತೀರ್ಥ ಸಂಗ್ರಹಣೆ ನೆರವೇರಲಿದ್ದು , 7ರಂದು ಬೆಳಗ್ಗೆ ವೇದಪಾರಾಯಣ ನಡೆಯಲಿದೆ.
8ರಂದು ಗುರುವಾರ ಬೆಳಗ್ಗೆ 6ರಿಂದ ಗಣಪತಿ ಪೂಜೆ, ವೇದಿಕಾರ್ಚನೆ ಪೂರ್ಣಾಹುತಿ 11ರಿಂದ ರಾಜಗೋಪುರ ಪರಿವಾರ ದೇವತೆಗಳು ಮತ್ತು ಮೂಲ ದೇವರ ಕುಂಬಾಭಿಷೇಕ ನೆರವೇರುವುದು.
Discussion about this post