ಯಾವುದೇ ಸವಾಲನ್ನು ಎದುರಿಸುವುದಕ್ಕೆ ಭಾರತೀಯ ಸಶಸ್ತ್ರ ಪಡೆಗಳು ಸನ್ನದ್ಧವಾಗಿವೆ ಎಂಬುದನ್ನು ಸ್ಪಷ್ಟಪಡಿಸಿದ ದೇಶದ ವಾಯುಪಡೆ ಮುಖ್ಯಸ್ಥ ಅರುಪ್ ರಾಹ ಗಡಿ ನಿಯಂತ್ರಣ ರೇಖೆಯಾಚೆ ಪಿಒಕೆಯಲ್ಲಿ ನಡೆದ ನಿದರ್ಿಷ್ಟ ದಾಳಿ ಕುರಿತು ಸಾಕಷ್ಟು ಚಚರ್ೆಗಳಾಗಿವೆ. ಆದರೆ ಸಶಸ್ತ್ರ ಪಡೆಗಳು ಮಾತನ್ನಾಡದೆ ಮಾಡಬೇಕಾದ್ದನ್ನು ನಿಷ್ಠೆಯಿಂದ ಮಾಡುತ್ತವೆ ಎಂದು ಅವರು ಮಾಮರ್ಿಕವಾಗಿ ಹೇಳಿದ್ದಾರೆ.
ಸೆ.29 ಮಧ್ಯ ರಾತ್ರಿಯಲ್ಲಿ ಎಲ್ಒಸಿಯಾಚೆ ನಡೆದ ನಿದರ್ಿಷ್ಟ ದಾಳಿ ಬಗ್ಗೆ ಬೇಕಾದಷ್ಟು ಚಚರ್ೆಯಾಗಿದೆ. ಸಮಾಜದ ಪ್ರತಿಯೊಂದು ವರ್ಗ ಕೂಡ ಈ ಬಗ್ಗೆ ಅಭಿಪ್ರಾಯ ನೀಡಿದೆ. ಆದರೆ ಸಶಸ್ತ್ರ ಪಡೆಗಳು ಮಾತನಾಡದ ದೇಶ ನಿರೀಕ್ಷಿಸುವ ಫಲಿತಾಂಶವನ್ನು ತಲುಪಿಸುವುದಕ್ಕೆ ಕ್ರಿಯಾಶೀಲವಾಗಿರುವವೆಂದು ಏರ್ ಚೀಫ್ ಮಾರ್ಶಲ್ ರಾಹ ಹಿಂಡನ್ ವಾಯುನೆಲೆಯಲ್ಲಿ 84ನೇ ವಾಯುಪಡೆಯ ದಿನಾಚರಣೆ ವೇಳೆ ಶನಿವಾರ ಅಭಿಪ್ರಾಯಪಟ್ಟರು.
ಸಶಸ್ತ್ರ ಪಡೆಗಳ ಸಿಬ್ಬಂದಿ ಸಮಿತಿ ಮುಖ್ಯಸ್ಥರ ಅಧ್ಯಕ್ಷರು ಕೂಡ ಆಗಿರುವ ರಾಹ ನಿದರ್ಿಷ್ಟ ದಾಳಿ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ನಿರಾಕರಿಸಿದರು.
ಉರಿ ಸೇನಾ ನೆಲೆಯ ಮೇಲೆ ಭಯೋತ್ಪಾದಕ ದಾಳಿಯಿಂದ 19 ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಎಲ್ಒಸಿಯಾಚೆ ನಿದರ್ಿಷ್ಟ ದಾಳಿಯನ್ನು ಭಾರತೀಯ ಸೇನೆ ಯೋಜಿಸಿತ್ತು.
ಪಂಜಾಬಿನ ಪಠಾಣ್ ಕೋಟ್ ಮತ್ತು ಜಮ್ಮು-ಕಾಶ್ಮೀರದ ಉರಿ ಮೇಲಾದ ಪಾಕ್ ಸೇನಾ ಕುಮ್ಮಕ್ಕಿನ ಭಯೋತ್ಪಾದನಾ ದಾಳಿಗಳಿಗೆ ಪ್ರತೀಕಾರವಾಗಿ ನಿದರ್ಿಷ್ಟ ದಾಳಿಯನ್ನು ಸಕಾಲದಲ್ಲಿ ಕೈಗೆತ್ತಿಕೊಳ್ಳಲಾಗಿತ್ತೆಂಬುದನ್ನು ವಾಯುಪಡೆ ದಿನಾಚರಣೆ ಭಾಷಣದಲ್ಲಿ ರಾಹ ಸಮಥರ್ಿಸಿಕೊಂಡರು.
ಪಾಕ್ ಸೇನಾ ಪ್ರಚೋದಿತ ಪಾಕ್ ಮೂಲದ ಭಯೋತ್ಪಾದಕರು ಭಾರತೀಯ ಸೇನಾ ನೆಲೆ ಉರಿ ಹಾಗೂ ವಾಯುನೆಲೆ ಪಠಾಣ್ಕೋಟ್ ಮೇಲೆ ನಡೆಸಿದ್ದರಿಂದಲೇ ಅವರ ಹುಟ್ಟಡಗಿಸಲು ನಿದರ್ಿಷ್ಟ ದಾಳಿ ಅನಿವಾರ್ಯವಾಯಿತೆಂದು ರಾಹ ತಿಳಿಸಿದರು.
ಪಾಕ್ ಕುಮ್ಮಕ್ಕಿನಲ್ಲಿ ಏನೇ ಘಟನೆ ನಡೆದರೂ ನಾವು ಪ್ರತಿ ಘಟನೆಯಿಂದ ಹೊಸ ಪಾಠ ಕಲಿತು ಹೆಚ್ಚೆಚ್ಚು ಚುರುಕಾಗುತ್ತಾ ಹೋಗುವುದಾಗಿ ರಾಹ ಹೇಳಿದರು.
Discussion about this post