Read - < 1 minute
ಹೈದರಾಬಾದ್, ಅ.18: ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅಂತರ್ರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಥ್ಲೀಟ್ ಗಳ ಆಯೋಗದ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ.
ಏಂಜೆಲಾ ರುಗ್ಗಿರೋ ನೇತೃತ್ವದ ಈ ಆಯೋಗ 9 ಉಪಾಧ್ಯಕ್ಷರನ್ನು, 10 ಮಂದಿ ಸದಸ್ಯರನ್ನು ಒಳಗೊಂಡಿದೆ. ಭಾರತೀಯ ಕ್ರೀಡಾಪಟುವೊಬ್ಬರಿಗೆ ಸಿಕ್ಕಿರುವ ಅಪರೂಪದ ಗೌರವ ಇದಾಗಿದೆ.ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬ್ಯಾಚ್, ಸೈನಾಗೆ ಪತ್ರ ಮುಖೇನ ಸದಸ್ಯರನ್ನಾಗಿ ನೇಮಕ ಮಾಡಿರುವುದನ್ನು ಖಚಿತಪಡಿಸಿದ್ದಾರೆ. ಸೈನಾ ನೆಹ್ವಾಲ್ ನವೆಂಬರ್ 6ರಂದು ನಡೆಯಲಿರುವ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸೈನಾ ತಂದೆ ಹರ್ಮೀರ್ ಸಿಂಗ್, ಸೈನಾ ಪಾಲಿನ ವಿಶೇಷವಾದ ಗೌರವ ಇದಾಗಿದೆ. ಅಂತರ್ರಾಷ್ಟ್ರೀಯ ಒಲಿಂಪಿಕ್ ಸಮಿತಿ ಆಕೆಯನ್ನು ಸಾಧಕಿಯನ್ನಾಗಿ ಗುರುತಿಸಿ ಸದಸ್ಯತ್ವ ನೀಡುತ್ತಿರುವ ಬಗ್ಗೆ ಬಹಳ ಖುಷಿಯಾಗಿದೆ ಎಂದು ಹೇಳಿದ್ದಾರೆ.
Discussion about this post