Read - < 1 minute
ಪುತ್ತೂರು, ಸೆ.1: ದಕ್ಷಿಣ ಕನ್ನಡದ ಪುತ್ತೂರು ತಾಲೂಕು ಕೊಂಬಾರು ಗ್ರಾಮದ ಹಿಂದೂ ಜಾಗರಣ ವೇದಿಕೆ ಕೆಂಜಾಳ ಘಟಕದ ವಿದ್ಯಾರ್ಥಿಗಳೇ ಕೂಡಿರುವ ಕಾರ್ಯಕರ್ತರು ಕೆಂಜಾಳ-ಕೊಂಬಾರು ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ್ದಾರೆ.
ಯುವ ಉತ್ಸಾಹಿ ಪಡೆ ಕಟ್ಟಿಕೊಂಡಿರುವ ಈ ಯುವಕರು, ಇಲ್ಲಿನ ಉತ್ಸಾಹಿ ಮುಖಂಡ ಕೊಂಬಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಕುಮಾರ್ ಹಾಗೂ ಕೃಷಿ ಸಹಕಾರಿ ಬ್ಯಾಂಕ್ ಬಿಳಿನೆಲೆ ಉಪಾಧ್ಯಕ್ಷ ಚನ್ನಕೇಶವ ಗೌಡ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ನಡೆಯಿತು.
ಒಗ್ಗಟ್ಟು ಕಡಿಮೆಯಿದ್ದ ಈ ಗ್ರಾಮದಲ್ಲಿ, ಕೆಲವು ಉತ್ಸಾಹಿ ಯುವಕರು ಒಟ್ಟಾಗಿ ಸೇರಿಕೊಂಡು ಹಿಂದೂ ಜಾಗರಣ ವೇದಿಕೆ ಎಂಬ ಸಂಘವೊಂದನ್ನು ಸೃಜಿಸಿಕೊಂಡಿದ್ದಾರೆ. ಇದರಿಂದಾಗಿ ಹಿಂದೂಗಳು ಮಾತ್ರ ಇರುವ ಈ ಊರಿನಲ್ಲಿ ವಿರೋಧಿಗಳ ಅಬ್ಬರ ಕಡಿಮೆಯಾಗಿದೆ.
ಹಿಂದೂ ಜಾಗರಣ ವೇದಿಕೆ ಹೆಸರಿನ ಸಂಘದಲ್ಲಿನ ಈ ಉತ್ಸಾಹಿ ಯುವಕರ ತಂಡ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಶಾಲಾ, ಕಾಲೇಜು ವಿದ್ಯಾರ್ಥಿಗಳಾಗಿರುವುದು ಸಂತಸದ ಸಂಗತಿಯಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಸಂಘದ ಅಧ್ಯಕ್ಷರಾಗಿ ಜಯಕೃಷ್ಣ, ಉಪಾಧ್ಯಕ್ಷರಾಗಿ ರಾಧಾಕೃಷ್ಣ, ಕಾರ್ಯದರ್ಶಿಯಾಗಿ ಪ್ರಶಾಂತ್, ಖಜಾಂಚಿಯಾಗಿ ಸತೀಶ್ ಸದಸ್ಯರುಗಳಾಗಿ ತಾರಾನಾಥ್, ಓಮ್ ಪ್ರಕಾಶ್, ವಿನೋದ್, ಚಂದನ್, ಸತ್ಯಪ್ರಿಯ, ರಾಕೇಶ್, ಭರತ್, ದಿನೇಶ್, ಪ್ರವೀಣ್ , ಜೀವನ್, ಚಿದಾನಂದ, ವಿನೋದ್, ಕೌಶಿಕ್, ಅಶ್ವಥ್, ಮೋಹಿತ್, ಹರ್ಷಿತ್, ರಂಜಿತ್, ಮುರಳಿ ಅವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
Discussion about this post