Read - < 1 minute
ನವದೆಹಲಿ, ಅ.19: ಈ ಹಿಂದೆ ಕೂಡ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿಯನ್ನು ನಡೆಸಲಾಗಿತ್ತು. ಭಯೋತ್ಪಾದಕ ಚಟುವಟಿಕೆ ಗಳನ್ನು ಮಟ್ಟಹಾಕುವ ನಿಟ್ಟಿನಿಂದ ಭಾರತೀಯ ಸೇನೆ ಈ ಹಿಂದೆಯೂ ಗುರಿ ಕೇಂದ್ರಿತ ಮತ್ತು ಸೀಮಿತ ದಾಳಿಯನ್ನು ಕೈಗೊಂಡಿತ್ತು. ಆದರೆ, ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದು ಮಾತ್ರ ಇದೇ ಮೊದಲು ಎಂದು ಸಂಸದೀಯ ಸಮಿತಿಗೆ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ.
ಸೆ.೨೯ರಂದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ರಾಜಕೀಯ ಪ್ರೇರಿತ ಹೇಳಿಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಮನೋಹರ್ ಪರಿಕ್ಕರ್, ಉಗ್ರರ ವಿರುದ್ಧ ಸೀಮಿತ ದಾಳಿ ನಡೆಸಿರುವುದು ಇದೇ ಮೊದಲು ಎಂದು ಹೇಳಿದ್ದರು.
ಈ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡುವಂತೆ ಸಂಸದರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಸದೀಯ ಸಮಿತಿಗೆ ಜೈಶಂಕರ್ ಮಾಹಿತಿ ನೀಡಿದ್ದಾರೆ.
ಉಗ್ರರು ಅಡುಗುತಾಣಗಳ ಮೇಲೆ ಹಾಗೂ ಉಗ್ರರ ವಿರುದ್ಧ ಈ ಹಿಂದೆ ಕೂಡ ಭಾರತೀಯ ಸೇನೆ ಸೀಮಿತ ದಾಳಿಯನ್ನು ನಡೆಸಿತ್ತು. ಆದರೆ, ಸೀಮಿತ ದಾಳಿಯ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದು ಮಾತ್ರ ಇದೇ ಮೊದಲು. ಈ ಹಿಂದೆ ನಡೆಸಿದ್ದ ದಾಳಿ ವೃತ್ತಿಪರವಾಗಿತ್ತು ಎಂದು ಮಾಹಿತಿ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಸರ್ಜಿಕಲ್ ದಾಳಿಗೆ ಸಂಬಂಧಿಸಿದಂತೆ ಸಂಸದೀಯ ಸಮಿತಿ ತನಿಖೆ ಕೈಗೊಂಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಸರ್ಜಿಕಲ್ ದಾಳಿ ನಡೆಸ ಲಾಗಿತ್ತೇ ಎಂದು ಕೆಲವು ಸಂಸದರು ಪ್ರಶ್ನೆಗಳನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿರುವ ವಿದೇಶಾಂಗ ಕಾರ್ಯದರ್ಶಿ ಜೈ ಶಂಕರ್, ಈ ಹಿಂದೆಯೂ ದಾಳಿ ನಡೆಸಲಾಗಿತ್ತು. ದಾಳಿಗಳು ಮುಗಿದ ಕೂಡಲೇ ಪಾಕಿಸ್ಥಾನಕ್ಕೆ ಮಾಹಿತಿ ನೀಡಲಾಗುತ್ತಿತ್ತು. ಆದರೆ, ಮೊದಲ ಬಾರಿಗೆ ಸರ್ಕಾರ ಈ ವಿಷಯ ವನ್ನು ಬಹಿರಂಗವಾಗಿ ಹೇಳಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
—————-
S R Aniruddha Vasishta
Discussion about this post