ವಿಜಯಪುರ: ಸೆ;25; ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ನಿರಂತರ ಸಾಮೂಹಿಕ ಅತ್ಯಾಚಾರಸೆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರದಲ್ಲಿ ಘಟನೆ ನಡೆದಿದ್ದು, ಅಲಿಯಾಬಾದ್ ತಾಂಡಾದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಲಾಡ್ಜ್ ನಲ್ಲಿಟ್ಟು ಅತ್ಯಾಚಾರವೆಸಗಲಾಗಿದೆ ಎಂದು ಬಾಲಕಿ ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರು ಅಪ್ರಾಪ್ತರೂ ಸೇರಿದಂತೆ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಗ್ಯಾಂಗ್ ರೇಪ್ ಬಗ್ಗೆ ಮಾಹಿತಿ ಪಡೆದ ಎಸ್ಪಿ ಎಸ್ ಎನ್ ಸಿದ್ದರಾಮಪ್ಪ ತನಿಖೆ ಕೈಗೊಂಡಿದ್ದಾರೆ. ಪಾರದರರ್ಶಕ ತನಿಖೆ ನಡೆಸುತ್ತಿಲ್ಲವೆಂದು ಆರೋಪಿಸಿ ಬಾಲಕಿ ಪೋಷಕರು ಗ್ರಾಮೀಣ ಠಾಣೆ ಎದುರು ಧರಣಿ ಕೈಗೊಂಡಿದ್ದಾರೆ.
Discussion about this post