ವಾಷಿಂಗ್ಟನ್, ಅ.13: ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಶಕ್ತಿ ಮತ್ತೊಮ್ಮೆ ಸಾಬೀತಾಗಿದ್ದು, ಅಮೆರಿಕಾ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗುವವರು 100 ದಿನದೊಳಗೆ ಮೋದಿಯವರನ್ನು ಭೇಟಿಯಾಗುವುದು ಅನಿವಾರ್ಯ ಎಂದು ಅಮೆರಿಕಾ ವಿಚಾರ ವೇದಿಕೆ ಸಲಹೆ ನೀಡಿದೆ.
ಈ ಕುರಿತಂತೆ ಉನ್ನತ ಮಟ್ಟದ ಅಭಿಪ್ರಾಯವನ್ನು ನಿನ್ನೆ ಮಂಡಿಸಲಾಗಿದ್ದು, ಕೇಂದ್ರೀಯ ತಂತ್ರ ಮತ್ತು ಅಂತಾರಾಷ್ಟ್ರೀ ಅಧ್ಯಯನ ನೀಡಿದ ಭಾರತ-ಅಮೆರಿಕ ಭದ್ರತಾ ಸಹಕಾರ ಎಂಬ ವರದಿಯಲ್ಲಿ ಅಮೆರಿಕ ವಿಚಾರ ವೇದಿಕೆ ಈ ಸಲಹೆ ನೀಡಿದೆ.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತ-ಅಮೆರಿಕಾ ಸಂಬಂಧ ವೃದ್ಧಿಸಿದೆ. ಇದನ್ನು ಮುಂದುವರೆಸುವ ಅವಶ್ಯಕತೆಯಿಂದ ಅಮೆರಿಕಾ ಅಧ್ಯಕ್ಷರು ಪ್ರಧಾನಿ ಮೋದಿ ಅವರನ್ನು 100 ದಿನದ ಒಳಗಾಗಿ ಭೇಟಿಯಾಗಬೇಕು. ಉಭಯ ದೇಶಗಳ ಭದ್ರತಾ ಬಾಂಧವ್ಯ ವೃದ್ಧಿಗೆ ಭಾರತದೊಂದಿಗೆ ಒಪ್ಪಂದಗಳಿಗೆ ಆದಷ್ಟು ಬೇಗ ಸಹಿ ಮಾಡುವುದು ಉತ್ತಮ ಎಂದು ಹೇಳಿದೆ. ಭಾರತ ತನ್ನ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿದ್ದು ಅಮೆರಿಕಾದೊಂದಿಗೆ ಕೆಲ ಒಪ್ಪಂದಗಳನ್ನು ಮಾಡಿಕೊಳ್ಳಲು ಮುಂದಾಗಿದೆ. ಒಂದು ವೇಳೆ ಇದು ನೆರವೇರದಿದ್ದಲ್ಲಿ ಆತ್ಯಾಧುನಿಕ ಉಪಕರಣಗಳು, ಕಂಪ್ಯೂಟರ್ ಹಾಗೂ ಸಂವಹನ ತಂತ್ರಜ್ಞಾನವನ್ನು ಅಮೆರಿಕಾ ಭಾರತಕ್ಕೆ ಪೂರೈಸುವುದು ಅಸಾಧ್ಯ ಎಂದಿದೆ.
Discussion about this post