ಇಟಾನಗರ, ಸೆ.16: ಅರುಣಾಚಲ ಪ್ರದೇಶ ರಾಜಕೀಯದಲ್ಲಿ ಭಾರೀ ಧಿಡೀರ್ ಬದಲಾವಣೆ ಸಂಭವಿಸಿದ್ದು, ಮುಖ್ಯಮಂತ್ರಿ ಖಂಡು ಸೇರಿದಂತೆ 43 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಮೈತ್ರಿ ಕೂಟದ ಪಕ್ಷ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ದಿಢೀರ್ ಬೆಳವಣಿಗೆ ಅರುಣಾಚಲ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಠಿಸಿದ್ದು, ಕಾಂಗ್ರೆಸ್ ತಡೆಯಲಾರದ ಆಘಾತ ನೀಡಿದೆ.
ಈ ಕುರಿತಂತೆ ಮಾತನಾಡಿರುವ ಮುಖ್ಯಮಂತ್ರಿ ಪೇಮ ಖಂಡು, ಪಿಪಿಎ ಪಕ್ಷದೊಂದಿಗೆ ಕಾಂಗ್ರೆಸ್ ಪಕ್ಷವನ್ನು ವಿಲೀನಗೊಳಿಸುತ್ತಿದ್ದೇವೆ. ಈ ವಿಚಾರವನ್ನು ಸಭಾಪತ ವಾಂಗ್ಕಿ ಲೊವಾಂಗ್ ಅವರಿಗೆ ತಿಳಿಸಿದ್ದೇವೆ ಎಂದಿದ್ದಾರೆ.
ಕಾಂಗ್ರೆಸ್ ಶಾಸಕರು ನಮ್ಮ ಪಕ್ಷ ಸೇರುತ್ತಿದ್ದಾರೆ ಎಂದಿರುವ ಪಿಪಿಎ ಅಧ್ಯಕ್ಷ ಕಮೆಂಗ್ ರಿಂಗು ತಾತ್ಕಾಲಿಕ ಗಡಿಪಾರಿನ ನಂತರ ಮನೆಗೆ ವಾಪಸಾಗುತ್ತಿದ್ದಾರೆ ಎಂದು ಅರುಣಾಚಲ ಪ್ರದೇಶದ ಅಚ್ಚರಿ ಬೆಳವಣಿಗೆಯ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ತೂಕಿ ವಿರುದ್ಧ ಕಾಂಗ್ರೆಸ್ ಸದಸ್ಯರು ಬಂಡಾಯವೆದ್ದಿದ್ದಕ್ಕೆ ಅವರನ್ನು ಪದಚ್ಯುತಿಗೊಳಿಸಿ ಖಂಡು ಅವರನ್ನು ರಾಜ್ಯ ಸರ್ಕಾರದ ಮುಖ್ಯಸ್ಥನನ್ನಾಗಿ ನೇಮಿಸಿತ್ತು. ಆಗ, ದೊಡ್ಡ ಮಟ್ಟದಲ್ಲಿ ಸಂಭ್ರಮಿಸಿದ್ದ ಕಾಂಗ್ರೆಸ್‌ಗೆ ಈಗ ಆಘಾತವಾಗಿದೆ.
ಸದ್ಯ ಅರುಣಾಚಲ ಪ್ರದೇಶ ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ನಬಾಮ್ ತೂಕಿ ಒಬ್ಬರೇ ಶಾಸಕರಾಗಿ ಉಳಿದಿದ್ದಾರೆ.
Discussion about this post