ಸ್ವದೇಶಿ ದಿವಸವೆಂದೇ ಕರೆಯಲ್ಪಡುವ ಗಾಂಧಿ ಜಯಂತಿಯಂದು ಭಾರತದ ಹೆಮ್ಮೆಯ ಉತ್ಪನ್ನ, ಮೇಕ್ ಇನ್ ಇಂಡಿಯಾ ಪ್ರಶಸ್ತಿ ಪುರಸ್ಕೃತ, ಅಡಿಕೆ ಬೆಳೆಗಾರರ ಆಶಾಕಿರಣ ಎಂದೇ ಕರೆಯಲ್ಪಡುವ “ಅರೇಕಾ ಟಿ” ನಿನ್ನೆಯಿಂದ ಆನ್ ಲೈನ್ ಮಾರಾಟ ಆರಂಭಿಸಿದೆ. ಈಗಾಗಲೇ ಬಹಳಷ್ಟು ಬೇಡಿಕೆ ಭಾರತದತ್ಯಂತ ಬರುತ್ತಿದ್ದು ಅವರಿಗೆಲ್ಲ ತಲುಪಿಸುವ ಸಲುವಾಗಿ ಆನ್ಲೈನ್ ಮಾರಾಟ ಆರಂಭಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ನಿವೇದನ್ ನೆಂಪೆ ತಿಳಿಸಿದ್ದಾರೆ.
ಗಾಂಧಿ ಜಯಂತಿಯಂದು ಬೆಳಿಗ್ಗೆ 8 ಕ್ಕೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಯಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಸಮ್ಮುಕದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರಿಂದ ವಿಶೇಷ ಪ್ರಸಾದ ಹಾಗು ಆಶೀರ್ವಾದ ಪಡೆದು ನಂತರ ಉಡುಪಿಯ ಕೃಷ್ಣ ಮಠದಲ್ಲಿ ಸಂಜೆ 4 ಗಂಟೆಗೆ ಪೇಜಾವರ ಶ್ರೀ ವಿಶ್ವತೀರ್ಥ ಭಾರತಿ ಸ್ವಾಮಿಗಳ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ಮಠದ ಕಿರಿಯ ಸ್ವಾಮಿಗಳು ಪ್ರಸ್ತುತರಿದ್ದರು.
ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮಿಗಳು ಮಾತನಾಡಿ ” ಅಡಿಕೆಗೆ ಆಧಿ ಕಾಲದಿಂದಲು ವಿಶೇಷ ಸ್ಥಾನ ಮಾನವಿದ್ದು ಆರೋಗ್ಯದಾಯಕವೂ ಹೌದು ಎಂದರು ಮತ್ತು ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ಕಷ್ಟಗಳನ್ನು ಪರಿಹರಿಸಲು ಅಡಿಕೆ ಚಹಾ ಸಾಕಷ್ಟು ದೊಡ್ಡ ಪಾತ್ರವಹಿಸಲಿದೆ ಮತ್ತು ಬೇರೆ ಚಹಾಗಳು ಆರೋಗ್ಯದಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು ಅದರ ಬದಲು ಇದನ್ನು ಉಪಯೋಗಿಸಿದಲ್ಲಿ ಆರೋಗ್ಯವು ಸುಧಾರಿಸುತ್ತದೆ ಮತ್ತು ರೈತರ ಸಂಕಷ್ಟಗಳು ಪರಿಹಾರವಾಗುತ್ತದೆ ಎಂದರು. ನನಗೆ ಬಹಳ ಸಂತೋಷವಿದೆ ಈ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದು ಎಂದು ಸಂತಸದಿಂದ ನುಡಿದರು.
ಇದೆ ಸಂದರ್ಭದಲ್ಲಿ ಕಿರಿಯ ಸ್ವಾಮಿಗಳು ಮಾತನಾಡಿ ಇದು ಬರಿ ಚಹಾ ಮಾತ್ರವಲ್ಲ ಇದು ಕಷಾಯ ಮತ್ತು ಔಷದಿ ಎಂದರು. ಭಾರತದ ಉತ್ತಮ ಉತ್ಪನ್ನವಾಗಲಿ ಎಂದು ಆಶೀರ್ವಚಿಸಿದರು.
ಗ್ರೀನ್ ರೆಮೆಡಿಸ್ ನ ಮುಖ್ಯಸ್ಥ ಶ್ರೀ ವೇಣುಗೋಪಾಲ್ ಹೆಬ್ಬಾರ್ ಮತ್ತು ಅಡಿಕೆ ಚಹಾ ಸಂಶೋಧನೆ ಮಾಡಿದ ನಿವೇದನ್ ಮತ್ತು ಅವರ ಕುಟುಂಬದವರು ಭಾಗವಹಿಸಿದ್ದರು.
Discussion about this post