ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಈ ಸಂಸ್ಥೆಯ ವಿರುದ್ಧ ದಾಖಲಾಗಿರುವ ದೂರಿನಂತೆ ಆರೋಪಿಗಳಾದ ಸಂಸ್ಥೆಯ ನಿರ್ದೇಶಕರಾದ ಅವ್ವಾ ವೆಂಕಟರಾಮ ರಾವ್, ಅವ್ವಾ ವೆಂಕಟೇಶ ನಾರಾಯಣ ರಾವ್, ಸದಾಶಿವ ವರ ಪ್ರಸಾದ್ ಮತ್ತು ರಾಮಚಂದ್ರ ರಾವ್ ಅವರನ್ನು ಶನಿವಾರ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು..
ದೇಶದಾದ್ಯಂತ ಈ ಸಂಸ್ಥೆಯ ಮೇಲೆ ಪ್ರಕರಣಗಳು ದಾಖಲಾಗಿವೆ. ನಮ್ಮ ರಾಜ್ಯದಲ್ಲಿಯೂ ಬಹುತೇಕ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆಂದ್ರ ಸರ್ಕಾರ ಈ ಹಗರಣವನ್ನು ಸಿಬಿಐಗೆ ಒಪ್ಪಿದೆ. ನಮ್ಮ ರಾಜ್ಯದಲ್ಲಿ ಈ ಹಗರಣವನ್ನು ಸಿಐಡಿ ತನಿಖೆ ಮಾಡುತ್ತಿದೆ.
ನಮ್ಮ ರಾಜ್ಯದಲ್ಲಿ ಪ್ರಥಮ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ದಾಖಲಾಗಿತ್ತು. ಮಣಿಪಾಲದ ವಿಜಯನಗರದ ಕೃಷ್ಣ ನಾಯ್ಕ ಎಂಬವರು ಈ ಸಂಸ್ಥೆಯಲ್ಲಿ ಹಣ ಹೂಡಿದ್ದು, ಸಂಸ್ಥೆಯು ಅವಧಿ ಮುಗಿದರೂ ಕ್ಲಪ್ತ ಸಮಯದಲ್ಲಿ ಹಣಹಿಂದೆ ನೀಡದೆ, ಸಕರಾತ್ಮಕವಾಗಿ ಸ್ಪಂದಿಸದೇ ಮೋಸ ಮಾಡಿತ್ತು, ಈ ಹಿನ್ನೆಲೆಯಲ್ಲಿ ಕೃಷ್ಣ ಅವರು ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ್ದರು.
ರಾಜ್ಯ ಹೈಕೋರ್ಚಿನಲ್ಲಿಯೂ ಪ್ರಕರಣ ದಾಖಲಾಗಿದ್ದು, ಇದೀಗ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಹೈಕೋರ್ಟ್, ಕಾನೂನಿನಂತೆ ಪ್ರಥಮ ಪ್ರಕರಣ ದಾಖಲಾದ ಉಡುಪಿ ಜಿಲ್ಲೆಯ ಮತ್ತು ರಾಜ್ಯದ ಇತರ ಜಿಲ್ಲೆಗಳ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಬರುವಂತೆ ಆದೇಶಿಸಿದೆ.
ಅದರಂತೆ ಶನಿವಾರ ಸಿಐಡಿ ಡಿವೈಎಸ್ಪಿ ಅವರು ಆರೋಪಿಗಳನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಆರೋಪಿಗಳ ಪರವಾಗಿ ಆಂದ್ರ ಹೈಕೋರ್ಟಿನ ವಕೀಲ ಜಾನಕೀರಾಮ್ ಮತ್ತು ಕರ್ನಾಟಕ ಹೈಕೋರ್ಟಿನ ವಕೀಲ ದಿವಾಕರ್ ಅವರು ವಾದಿಸಿದರು. ದೂರುದಾರರ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕಿ ಶಾಂತಿ ಬಾಯಿ ವಾಧಿಸಿದರು.
ಎರಡೂ ಕಡೆಯ ವಾದವನ್ನು ಆಲಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಸಂಕರ್ ಅಮರಣ್ಣನವರ್ ಆರೋಪಿಗಳಿಗೆ ಅ. ೫ರವರೆಗೆ ಸಿಐಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.
Discussion about this post