ಬೆಂಗಳೂರು, ಸೆ.27: ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮುನ್ನಲೆಗೆ ತರುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್ ’ತಪಸ್’ ಎಂಬ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ ಉಚಿತ ಶಿಕ್ಷಣ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕದ ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ 30-40 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಉಚಿತವಾಗಿ ಪಿಯುಸಿ ಶಿಕ್ಷಣ ಮತ್ತು ಐ.ಐ.ಟಿ. ಪ್ರವೇಶ ನೀಡುತ್ತದೆ. ಅಲ್ಲದೇ ಉಚಿತ ಊಟ ಮತ್ತು ವಸತಿಯನ್ನು ವಿದ್ಯಾರ್ಥಿ ನಿಲಯದಲ್ಲಿ ಕಲ್ಪಿಸುತ್ತದೆ.
ಉಚಿತ ವಿದ್ಯಾರ್ಥಿ ನಿಲಯ: ಕ್ಷೇಮಕರ, ಸ್ವಚ್ಛ ಮತ್ತು ಆರೋಗ್ಯದಾಯಕ ಸಸ್ಯಾಹಾರಿ ಆಹಾರವನ್ನು ಉಚಿತವಾಗಿ ಒದಗಿಸಲಾಗುತ್ತದೆ.
ಸೌಕರ್ಯ: ತರಗತಿಗಳು, ಪ್ರಯೋಗಾಲಯಗಳು ಮತ್ತು ಸುಸಜ್ಜಿತ ಗ್ರಂಥಾಲಯ ಉತ್ತಮವಾಗಿ ವಿನ್ಯಾಸಗೊಂಡಿದೆ ಮತ್ತು ಕಠಿಣ ಪರಿಶ್ರಮದಿಂದ ಶ್ರೇಷ್ಠರೆನಿಸಲು ಸ್ಫೂರ್ತಿ ನೀಡುವಂತಿದೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಒದಗಿಸಲಾಗುವುದು. ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನ ಮತ್ತು ಬೇಸ್ನ ನುರಿತ ಉಪನ್ಯಾಸಕರುಗಳು ತರಬೇತಿ ನೀಡುತ್ತಾರೆ.
ಈ ವಿದ್ಯಾರ್ಥಿಗಳಿಗೆ IIT ಪ್ರವೇಶ ಪರೀಕ್ಷೆಯ ತಯಾರಿ ನಡೆಸಲು ತರಬೇತಿ ನೀಡುವುದರ ಮೂಲಕ ಬೇಸ್ ಸಹಕರಿಸುತ್ತದೆ.
ಅರ್ಹತೆಗಳು:
• ಪ್ರಸ್ತುತ ಸಾಲಿನಲ್ಲಿ SSLC/10ನೇ ತರಗತಿಯ ಪರೀಕ್ಷೆ ಬರೆಯುವವರಾಗಿರಬೇಕು.
• ೯ನೇ ತರಗತಿ ಅಂತಿಮ ಪರೀಕ್ಷೆಗಳಲ್ಲಿ ಕನಿಷ್ಠ 80% ಅಂಕಗಳನ್ನು ಪಡೆದಿರಬೇಕು.
• ಪೋಷಕರ ವಾರ್ಷಿಕ ವರಮಾನ ರೂ. 1,50,000(ಒಂದು ಲಕ್ಷ ಐವತ್ತು ಸಾವಿರ) ಮೀರಿರಬಾರದು.
• ಆಯ್ಕೆಯಾದರೆ ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬೆಂಗಳೂರಿಗೆ ತೆರಳಲು ಸಿದ್ಧರಿರಬೇಕು.
• ’ತಪಸ್’ ಪ್ರಕಲ್ಪ ಬಾಲಕ ವಿದ್ಯಾರ್ಥಿಗಳಿಗೆ ಮಾತ್ರ
ಆಯ್ಕೆ ವಿಧಾನ:
• ಆಯ್ಕೆಯನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಲಾಗುವುದು
• ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ಕೆಲವು ನಗರಗಳಲ್ಲಿ ಏಕಕಾಲದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು
• ಪರೀಕ್ಷಾ ದಿನಾಂಕ : 25 ಡಿಸೆಂಬರ್ 2016
• ಆಯ್ಕೆ ಪರೀಕ್ಷೆಗೆ ಯಾವುದೇ ಶುಲ್ಕವಿರುವುದಿಲ್ಲ
• ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಮೌಖಿಕ ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ನೀಡಲಾಗುವುದು
ಅರ್ಜಿ ಸಲ್ಲಿಕೆ ಹೇಗೆ?
• ವಿದ್ಯಾರ್ಥಿಗಳು ಓದುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ತಪಸ್ನ ಅಂತರ್ಜಾಲ ತಾಣ www.tapasedu.orgಗೆ ಭೇಟಿ ಕೊಟ್ಟು ಡೌನ್ಲೋಡ್ ಮಾಡಿಕೊಂಡು ಅವಶ್ಯಕ ವಿವರಗಳನ್ನು ಭರ್ತಿ ಮಾಡಿ ಮುಖ್ಯೋಪಾಧ್ಯಯರ ಸಹಿ ಪಡೆದು ತಪಸ್ ಪ್ರಕಲ್ಪಕ್ಕೆ ಕಳುಹಿಸುವುದು.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 30 (ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಅಂತರ್ಜಾಲವನ್ನು ತಪ್ಪದೇ ನೋಡುವುದು.)
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಸಂಯೋಜಕರು, ‘ತಪಸ್’ ಪ್ರಕಲ್ಪ
ರಾಷ್ಟ್ರೋತ್ಥಾನ ಪರಿಷತ್, ಕೇಶವಶಿಲ್ಪ ಕೆಂಪೇಗೌಡನಗರ, ಬೆಂಗಳೂರು-560 019
ದೂರವಾಣಿ: 080-26612652, 94812 01144
(ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಡಿಸೆಂಬರ್ ಮೊದಲ ವಾರದಲ್ಲಿ ವೆಬ್ ಸೈಟ್ನಲ್ಲಿ ಪ್ರಕಟಿಸಲಾಗುವುದು.)
Discussion about this post