Read - < 1 minute
ಬೆಂಗಳೂರು, ಅ.13: 2005ರಿಂದ 2015ರವರೆಗೆ ನಮ್ಮ ದೇಶದಲ್ಲಿ ಒಟ್ಟು 1.75 ಕೋಟಿ ಮಾಹಿತಿ ಹಕ್ಕು ಅರ್ಜಿಗಳು ಬಂದಿವೆ. ಕರ್ನಾಟಕದಲ್ಲಿ ಒಟ್ಟು 20 ಲಕ್ಷದ 73 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ದೇಶದಲ್ಲಿಯೇ ಎರಡನೆಯ ಸ್ಥಾನದಲ್ಲಿದ್ದು ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.
ಇಲ್ಲಿ ಕಳೆದ ಹತ್ತು ವರ್ಷಗಳಲ್ಲಿ 46 ಲಕ್ಷದ 26 ಸಾವಿರ ಅರ್ಜಿಗಳು ಬಂದಿವೆ. ಈ ಅಂಕಿಅಂಶವನ್ನು ಕಾಮನ್ ವೆಲ್ತ್ ಹ್ಯೂಮನ್ ರೈಟ್ಸ್ ಇನೀಶಿಯೇಟಿವ್(ಸಿಎಚ್ಆರ್ ಐ) ಬಿಡುಗಡೆ ಮಾಡಿದ್ದು, ದಕ್ಷಿಣ ಭಾರತದ ಜನರು ಹೆಚ್ಚು ಹೊಣೆಗಾರಿಕೆ ಹುಡುಕುತ್ತಾರೆ ಮತ್ತು ವಾಸ್ತವ ತಿಳಿಯಲು ಪ್ರಯತ್ನಿಸುತ್ತಾರೆ ಎಂದು ತಿಳಿದುಬರುತ್ತದೆ.
ಸಿಎಚ್ಆರ್ ಐ ವರದಿ ಪ್ರಕಾರ, ಕೇಂದ್ರ ಸರ್ಕಾರ 10 ವರ್ಷಗಳಲ್ಲಿ ಶೇಕಡಾ 27.20 ಮಾಹಿತಿ ಹಕ್ಕು ಅರ್ಜಿಗಳನ್ನು ಸ್ವೀಕರಿಸಿದ್ದು ಅವುಗಳಲ್ಲಿ 47.66 ಲಕ್ಷ ಪ್ರಶ್ನೆಗಳಿದ್ದವು.
ತೆಲಂಗಾಣ ಸರ್ಕಾರ ಮಾಹಿತಿ ಆಯೋಗವನ್ನು ಇನ್ನಷ್ಟೇ ರಚಿಸಬೇಕಿದೆ. ಪ್ರಸ್ತುತ ಆಂಧ್ರ ಪ್ರದೇಶ ರಾಜ್ಯ ಮಾಹಿತಿ ಆಯೋಗವೇ ಪ್ರಶ್ನೆ, ದೂರುಗಳನ್ನು ಸ್ವೀಕರಿಸುತ್ತಿವೆ.
ಕೇಂದ್ರ ಮಾಹಿತಿ ಮಾಜಿ ಆಯುಕ್ತ ಶೈಲೇಶ್ ಗಾಂಧಿ, ಉತ್ತರ ಭಾರತ ರಾಜ್ಯಗಳಿಗಿಂತ ದಕ್ಷಿಣ ಭಾರತ ಹಾಗೂ ಮಹಾರಾಷ್ಟ್ರಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಜನರಿಗೆ ಅರಿವು ಹೆಚ್ಚು. ದಕ್ಷಿಣ ಭಾರತದ ಜನರು ತಮ್ಮ ಹಕ್ಕುಗಳು ಮತ್ತು ತಮಗೆ ಅಗತ್ಯವಿರುವ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿ ಹೆಚ್ಚು ಎನ್ನುತ್ತಾರೆ. ಉತ್ತರ ಪ್ರದೇಶ ರಾಜ್ಯದಲ್ಲಿ ಸಾಮಾನ್ಯವಾಗಿ ಮಾಹಿತಿ ಹಕ್ಕಿನಡಿ ಅರ್ಜಿಗಳು ಬರುವುದು ಹೆಚ್ಚು ಆದರೆ ಆಯೋಗ ತನ್ನ ವಾರ್ಷಿಕ ವರದಿಗಳನ್ನು ಬಿಡುಗಡೆ ಮಾಡಿಲ್ಲ ಎಂದು ಅವರು ಹೇಳುತ್ತಾರೆ.
ಆನ್ ಲೈನ್ ಆರ್ ಟಿಐ.ಕಾಂ ಪೋರ್ಟಲ್ ನ ವಿನೋದ್ ರಂಗನಾಥನ್ ಅವರು ಆರ್ ಟಿಐ ಅರ್ಜಿ ಸಲ್ಲಿಸಲು ಜನರಿಗೆ ಸಹಾಯ ಮಾಡುತ್ತಿದ್ದು ಅವರು ಹೇಳುವ ಪ್ರಕಾರ ನಮ್ಮಲ್ಲಿ ಹೆಚ್ಚು ಸಂಖ್ಯೆಯಲ್ಲಿ ಆರ್ ಟಿಐ ಅರ್ಜಿಗಳು ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಿಂದ ಬರುತ್ತವೆ.
ಪ್ರಸ್ತುತ ಕೇಂದ್ರ ಮಾಹಿತಿ ಆಯೋಗ ಹಾಗೂ ಕರ್ನಾಟಕ, ಗುಜರಾತ್, ಮಿಜೋರಾಂ, ನಾಗಲ್ಯಾಂಡ್, ರಾಜಸ್ತಾನ ಮತ್ತು ಅಸ್ಸಾಂ ರಾಜ್ಯಗಳ ಮಾಹಿತಿ ಆಯೋಗಗಳು 2014-15ರಲ್ಲಿ ವಾರ್ಷಿಕ ವರದಿಗಳನ್ನು ಪ್ರಕಟಿಸಿವೆ. ಮಧ್ಯ ಪ್ರದೇಶ, ಮಣಿಪುರ, ತ್ರಿಪುರಾ ಮತ್ತು ಉತ್ತರ ಪ್ರದೇಶಗಳು ಇನ್ನಷ್ಟೆ ಪ್ರಕಟಿಸಬೇಕಿವೆ. 15 ಮಾಹಿತಿ ಆಯೋಗಗಳು ಪ್ರಕಟಿಸಿರುವ ಆರ್ ಟಿಐ ಅಂಕಿಅಂಶಗಳ ಪ್ರಕಾರ, ವರ್ಷದಲ್ಲಿ ಸುಮಾರು 26.60 ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಅಂದಾಜು ದೇಶಾದ್ಯಂತ 53ರಿಂದ 56 ಲಕ್ಷ ಆರ್ ಟಿಐ ಅರ್ಜಿಗಳು ವರ್ಷದಲ್ಲಿ ಸಲ್ಲಿಕೆಯಾಗುತ್ತವೆ ಎನ್ನುತ್ತದೆ ವರದಿ.
Discussion about this post