ಜಲಂಧರ್: ಮಾಜಿ ಬಿಜೆಪಿ ಸಾಂಸದ ನವಜೋತ್ ಸಿಂಗ್ ಸಿಧು , ಶಿರೊಮಣಿ ಅಖಾಲಿ ದಳದ ಅಮಾನತು ಶಾಸಕ ಪ್ರಗಾತ್ ಸಿಂಗ್, ಲೂಯಾನ ಮೂಲದ ಸಹೋದರರಾದ ಬಲ್ವಿಂದರ್ ಸಿಂಗ್ ಬೇನ್ಸ್ ಮತ್ತು ಸಿಮಾಜರ್ಿತ್ ಸಿಂಗ್ ಬೇನ್ಸ್ ಸ್ವಂತ ಪಕ್ಷ ಆವಾಜ್ – ಎ – ಪಂಜಾಬ್ ಕಟ್ಟುತ್ತಿರುವುದು ಆಫ್ ಪಕ್ಷಕ್ಕೆ ದೊಡ್ಡ ತಲೆನೋವಾಗಿದೆ.
ಇತ್ತೀಚೆಗೆ ಆಪ್ ಪಕ್ಷ ತನ್ನ ಸಂಚಾಲಕ ಸುಚಾ ಸಿಂಗ್ ಚೋತೆಪುರ್ ಅವರನ್ನು ತಮ್ಮ ಸ್ಥಾನದಿಂದ ಕಳೆಗಿಳಿಸಿತು. ಇದರ ಪರಿಣಾಮ ಸಿಧು, ಪ್ರಗಾತ್ ಮತ್ತು ಬೈನ್ಸ್ ಸಹೋದರರು ಆವಾಜ್ – ಎ – ಪಂಜಾಬ್ ಹೆಸರಿನ ಸ್ವತಂತ್ರ ಪಕ್ಷ ರಚಿಸಿದರು.
ನಾಲ್ಕನೆ ರಂಗ ಆವಾಜ್ – ಎ – ಪಂಜಾಬ್ ನೂತನ ಪಕ್ಷ ಉದಯವಾಗುತ್ತಿರುವ ಕುರಿತು ಆಪ್ ಪಕ್ಷ ಭಯಗ್ರಸ್ಥ ಸ್ಥಿತಿಯಲ್ಲಿದೆ ಎಂದು ಸ್ವತಃ ಆಪ್ ಪಕ್ಷದವರು ಹೇಳಿಕೊಂಡಿದ್ದಾರೆ. ಆಪ್ ಪಕ್ಷ ಸಿಧು ಅವರೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದಾರೆ. ಆದರೆ ಪ್ರಗಾತ್ ಸಿಂಗ್ ಅವರನ್ನು ಮನವೊಲಿಸಲು ಪಕ್ಷದ ನಾಯಕರು ಸಂಧಾನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹಲವಾರು ಸಂದರ್ಭಗಳಲ್ಲಿ ಬೇನ್ಸ್ ಸಹೋದರೊಂದಿಗೆ ಮನಸ್ಥಾಪ ಮಾಡಿಕೊಂಡು ಸಂಧಾನಗಳನ್ನು ನಡೆಸಿವೆ. ಬೇನ್ಸ್ ಸಹೋದರರು ಇನ್ನೊಂದು ಪಕ್ಷವನ್ನು ಸೇರುತ್ತಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತಿತ್ತು.
ಆಪ್ ನಾಯಕರು ಮನವೊಲಿಸಿರುವ ಕುರಿತು ಪ್ರಗಾತ್ ಸಿಂಗ್ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಂಡಿದ್ದಾರೆ.
Discussion about this post