ಮಂಡ್ಯ: ಸೆ:22: ಕನ್ನಂಬಾಡಿಯಲ್ಲಿ ನೀರೇ ಇಲ್ಲ. ನೀರೆಲ್ಲ ಹೋದ ಮೇಲೆ ನೀರು ನಿಲ್ಲಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೆಲ್ಲಾ ಬರೀ ನಾಟಕ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಗುಡುಗಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ಅಸಹಕಾರ ಚಳವಳಿ ವೇಳೆ ಮಾತನಾಡಿದ ಅವರು, ಕೆಆರ್ಎಸ್ನಲ್ಲಿ ನೀರಿಲ್ಲ. ಒಂದು ವೇಳೆ ನೀರಿದ್ದರೆ ಅದನ್ನು ತಮಿಳುನಾಡಿಗೆ ಬಿಟ್ಟುಬಿಡುತ್ತಿದ್ದರು. ನೀರೆಲ್ಲ ಹರಿದು ಹೋದ ಮೇಲೆ ನೀರು ನಿಲ್ಲಿಸಿದ್ದೇವೆ ಅಂದರೆ ಏನು ಪ್ರಯೋಜನ. ಸಿದ್ದರಾಮಯ್ಯ ಸುಮ್ಮನೆ ನಾಟಕವಾಡುತ್ತಿದ್ದಾರೆ. ಈಗ ವಿಶೇಷ ಅಧಿವೇಶನ ಕರೆದು ಏನು ಪ್ರಯೋಜನ ಎಂದು ಕಿಡಿಕಾರಿದರು.
ಸದ್ಯಕ್ಕೆ ಜಲಾಶಯದಲ್ಲಿ ಇರುವ ನೀರು ನೋಡಿದರೆ ಬೆಂಗಳೂರಿಗೆ ಡಿಸೆಂಬರ್ನವರೆಗೆ ನೀರು ಸಿಗಬಹುದೇನೋ, ಇನ್ನೇನಿದ್ದರೂ ಸಕರ್ಾರ ದೇವರ ಮೊರೆ ಹೋಗಬೇಕಷ್ಟೆ. ಆಗಲಾದರೂ ಮಳೆ ಬಂದು ಜನರನ್ನು ಕಾಪಾಡಬೇಕು ಎಂದು ಹೇಳಿದರು.
ನೀರು ರೈತರಿಗಷ್ಟೆ ಅಲ್ಲ. ಎಲ್ಲರಿಗೂ ಬೇಕು. ಹಾಗಾಗಿ ಅಸಹಕಾರ ಚಳವಳಿಯಲ್ಲಿ ಎಲ್ಲರೂ ಭಾಗವಹಿಸುವಂತೆ ಸಕರ್ಾರಿ ನೌಕರರಿಗೆ ಕೇಳಿಕೊಂಡಿದ್ದೇನೆ. ಕಂದಾಯ ಇಲಾಖೆ, ಜಿಪಂ, ತಾಪಂ, ಆರ್ಟಿಒ, ಡಿಸಿ ಕಚೇರಿ, ಪಂಚಾಯತ್ ರಾಜ್, ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಭೇಟಿ ನೀಡಿ ಅಸಹಕಾರ ಚಳವಳಿಗೆ ಸ್ಪಂದಿಸುವಂತೆ ಮಾದೇಗೌಡ ಆಗ್ರಹಿಸಿದರು.















