ಅಹ್ಮದಾಬಾದ್: ಅ:6:ಸಮುದ್ರ ಮಾರ್ಗವಾಗಿ ಭಯೋತ್ಪಾದಕರು ನುಸುಳಿ ಬರಲು ಯತ್ನಿಸುವ ಸಾಧ್ಯತೆ ಬಗ್ಗೆ ಗುಪ್ತಚರ ಏಜೆನ್ಸಿಗಳಿಂದ ಹೊಸದಾಗಿ ಮಾಹಿತಿ ಬಂದಿರುವುದನ್ನು ಅನುಸರಿಸಿ ಗುಜರಾತ್ ಕರಾವಳಿಯಲ್ಲಿ ಪಹರೆಯನ್ನು ಹೆಚ್ಚಿಸಲಾಗಿದೆ. ಗುಜರಾತ್ ಕರಾವಳಿಯ ಬಂದರುಗಳು, ತೈಲಾಗಾರಗಳಂತ ಪ್ರಮುಖ ಕಟ್ಟಡ ಸ್ಥಾವರಗಳನ್ನು ಮತ್ತು ದ್ವಾರಕ ಹಾಗೂ ಸೋಮನಾಥದಲ್ಲಿ ಪ್ರಸಿದ್ಧ ದೇವಸ್ಥಾನಗಳನ್ನು ಹೊಂದಿದೆ.
ಇತ್ತೀಚೆಗೆ ಗುಪ್ತಚರ ದಳ (ಐಬಿ)ದಿಂದ ಬಂದ ಮಾಹಿತಿಗಳ ಹಿನ್ನೆಲೆಯಲ್ಲಿ ಗುಜರಾತ್ನ ಕರಾವಳಿ ಜಿಲ್ಲೆಗಳಿಗೆ ಕಟ್ಟೆಚ್ಚರದ ಸೂಚನೆ ನೀಡಲಾಗಿದೆ ಎಂದು ದೇವಭೂಮಿ – ದ್ವಾರಕಾ ಜಿಲ್ಲಾ ಪೊಲೀಸ್ ಸುಪರಿಂಟೆಂಡೆಂಟ್ ಆರ್.ಜೆ. ಪಗರ್ಿ ಹೇಳಿದ್ದಾರೆ.
ಐಬಿ ನೀಡಿರುವ ಹೊಸ ಮಾಹಿತಿಯೊಂದರ ಪ್ರಕಾರ ಸಮುದ್ರ ಮಾರ್ಗವಾಗಿ ಉಗ್ರರು ನುಸುಳಿ ಬರುವ ಸಾಧ್ಯತೆ ಇದೆ. ದೇವಭೂಮಿ -ದ್ವಾರಕ ಕರಾವಳಿ ಪಾಕಿಸ್ಥಾನಕ್ಕೆ ಬಹಳ ಹತ್ತಿರವಿದೆ. ಆದ್ದರಿಂದ ಯಾರಾದರೂ ಬೋಟ್ ಬಳಸಿ ಭಾರತ ಪ್ರವೇಶಿಸಲು ಬಯಸಿದರೆ ಅವರು ನಮ್ಮ ಕರಾವಳಿಯನ್ನು ಆಯ್ಕೆ ಮಾಡಬಹುದು. ಮಾಹಿತಿ ಬಂದ ನಂತರ ನಾವು ನಮ್ಮ ಸಿಬ್ಬಂದಿಗಳನ್ನು ಕಟ್ಟೆಚ್ಚರದಲ್ಲಿ ಇರಿಸಿದ್ದೇವೆ ಎಂದು ಅವರು ಹೇಳಿದರು.
ಭಾರತೀಯ ಸೇನೆ ನಿಯಂತ್ರಣ ರೇಖೆಯಾಚೆ ನಿದರ್ಿಷ್ಟ ಗುರಿ ದಾಳಿ ನಡೆಸಿದ ಕೆಲವು ದಿನಗಳ ನಂತರ ಐಬಿಯಿಂದ ಹೊಸದಾಗಿ ಮಾಹಿತಿ ಬಂದಿತ್ತು.
ವಿಶ್ವ ಪ್ರಸಿದ್ಧ ದ್ವಾರಕಾಶ ದೇವಸ್ಥಾನಕ್ಕೆ ಕೂಡಾ ಬೆದರಿಕೆ ಇರುವುದರಿಂದ ನಾವು ಡಿವೈಎಸ್ಪಿ ದಜರ್ೆಯ ಅಕಾರಿಯೊಬ್ಬರ ಕೈಕೆಳಗೆ ಕಮಾಂಡೊಗಳನ್ನು ನಿಯೋಜಿಸಿದ್ದೇವೆ. ಪಹರೆ ಹೆಚ್ಚಿಸಲು ನೌಕಾ ಪಡೆ ಮತ್ತು ತಟರಕ್ಷಕ ಪಡೆಯೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಸಗರ್ಿ ಹೇಳಿದರು. ಗುರುವಾರ ಅವರು ಕರಾವಳಿ ಸಮೀಪ ಬೋಟ್ ಒಂದರಲ್ಲಿ ಪರಿಶೀಲನೆ ನಡೆಸಿದ್ದಾರೆ.
ದೇವಸ್ಥಾನವಿರುವ ದ್ವಾರಕ ಕರಾವಳಿಯಲ್ಲಲ್ಲದೆ ದೇವಸ್ಥಾನ ನಗರಿಯ ಸಮೀಪವಿರುವ ಸಣ್ಣ ದ್ವೀಪವಾದ ಬೆಟ್ – ದ್ವಾರಕದಲ್ಲಿ ಕೂಡಾ ಭಾರೀ ಪ್ರಮಾಣದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
Discussion about this post