Read - < 1 minute
ಇಸ್ಲಾಮಾಬಾದ್:ಸೆ:24:ಉರಿ ಉಗ್ರರ ದಾಳಿ ಕಾಶ್ಮೀರ ಹಿಂಸಾಚಾರ ಪರಿಸ್ಥಿತಿಯಿಂದ ಪ್ರಚೋದನೆಗೊಂಡು ನಡೆಸಿದ ಘಟನೆಯಾಗಿರಬಹುದು. ಈ ವಿಷಯದಲ್ಲಿ ಸಾಕ್ಷಾಧಾರವಿಲ್ಲದೇ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ನವಾಜ್ ಷರೀಫ್ ಅವರು ಲಂಡನ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲಿನ ದಾಳಿ ಕಾಶ್ಮೀರ ಪರಿಸ್ಥಿತಿಯೇ ಪ್ರಚೋದನೆ ಆಗಿರಬಹುದು ಎಂದಿದ್ದಾರೆ.
ಕಳೆದೆರಡು ತಿಂಗಳಿನಿಂದ ಕಾಶ್ಮೀರದಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ್ದು ಇದರಲ್ಲಿ ತಮ್ಮ ಹತ್ತಿರ ಸಂಬಂಧಿಗಳನ್ನು ಕಳೆದುಕೊಂಡವರು ಉರಿ ಸೇನಾ ಶಿಬಿರದ ಮೇಲಿನ ದಾಳಿ ನಡೆದಿರಬಹುದು. ಆದರೆ ಭಾರತ ಮಾತ್ರ ಯಾವುದೇ ಸಾಕ್ಷ್ಯಾಧಾರವಿಲ್ಲದೆ ಪಾಕಿಸ್ತಾನವನ್ನು ದೂರುತ್ತಿದೆ ಎಂದು ನವಾಜ್ ಷರೀಫ್ ಆರೋಪಿಸಿದ್ದಾರೆ.
ಉರಿ ದಾಳಿ ಬಳಿಕ ಭಾರತ ಯಾವುದೇ ತನಿಖೆ ನಡೆಸದೆ. ಯಾವುದೇ ಸಾಕ್ಷ್ಯಾಧಾರವಿಲ್ಲದೆ ಕೆಲ ಗಂಟೆಗಳಲ್ಲೆ ಭಾರತ ಪಾಕಿಸ್ತಾನವನ್ನು ನಿಂದಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಭಾರತ ನಡೆಸಿರುವ ದೌರ್ಜನ್ಯದಿಂದಾಗಿ ಕಾಶ್ಮೀರದಲ್ಲಿ ಈವರೆಗೆ 108 ಜನ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಮುಗ್ದ ಕಾಶ್ಮೀರಿಗಳ ವಿರುದ್ಧ ಭಾರತ ನಡೆಸುತ್ತಿರುವ ಅಪರಾಧ ಇಡೀ ವಿಶ್ವಕ್ಕೆ ತಿಳಿದಿದೆ. ಆದಾಗ್ಯೂ ಭಾರತ ಪಾಕಿಸ್ತಾನದ ವಿರುದ್ಧ ಆಪಾದನೆ ಮಾಡುತ್ತಿದೆ. ಭಾರತ, ಪಾಕ್ ವಿರುದ್ಧ ಆರೋಪಿಸುವುದಕ್ಕೂ ಮೊದಲು ಕಾಶ್ಮೀರದಲ್ಲಿ ತಾನು ನಡೆಸಿದ ದುಷ್ಟ ಪಾತ್ರವನ್ನು ಮೊದಲು ಗಮನಿಸಲಿ ಎಂದು ಗಂಭೀರ ಆರೋಪ ಮಾಡಿದ್ದಾರೆ.
Discussion about this post