Read - < 1 minute
ನವದೆಹಲಿ, ಸೆ.29: ಉರಿ ಸೆಕ್ಟರ್ ಮೇಲಿನ ಉಗ್ರರ ದಾಳಿ ಹಿನ್ನೆಲೆಯಲ್ಲಿ ಪಾಕ್ ಗಡಿಯೊಳಗೆ ನುಗ್ಗಿ ನೂರಾರು ಉಗ್ರರನ್ನು ಭಾರತೀಯ ಯೋಧರು ಅಕ್ಷರಶಃ ಬೇಟೆಯಾಡಿದ್ದಾರೆ. ನಿನ್ನೆ ರಾತ್ರಿ ಅತ್ತ ಕಾರ್ಯಾಚರಣೆ ನಡೆಯುತ್ತಿದ್ದರೆ, ಈ ಆಪರೇಶನ್ ಗೆ ಆದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಇಡೀ ರಾತ್ರಿ ನಿದ್ದೆ ಮಾಡದೇ ಮಾಹಿತಿ ಪಡೆಯುತ್ತಿದ್ದರು.
ತಡರಾತ್ರಿ ಉಗ್ರರ ಕಾರ್ಯಾಚರಣೆಗೆ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದ ಕೇಂದ್ರ ಸರ್ಕಾರ ಉಗ್ರರ ಹುಟ್ಟಡಗಿಸಲು ಸರ್ವಸನ್ನದ್ದಗೊಂಡಿತ್ತು. ಕಾರ್ಯಾಚರಣೆ ಆರಂಭದಿಂದಲೂ ಪ್ರಧಾನಿ ಮೋದಿ ಮಾಹಿತಿ ಪಡೆಯುತ್ತಿದ್ದರು. ಇದರಿಂದಾಗಿ ರಾತ್ರಿಯಿಡೀ ನಿದ್ದೆ ಮಾಡದ ಪ್ರಧಾನಿಯ ನಡೆ, ಹಾಗೂ ರಾಜತಾಂತ್ರಿಕತೆಗೆ ದೇಶಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ನಿನ್ನೆ ಇಡೀ ದೇಶ ಭಗತ್ ಸಿಂಗ್ ನ ಹುಟ್ಟು ಹಬ್ಬ ಆಚರಿಸಿ ತಣ್ಣಗೆ ಮಲಗಿತ್ತು.. ಆದರೆ ಸೇನೆ-ಸರ್ಕಾರ ಸದ್ದಿಲ್ಲದೆ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡು ಕುಳಿತಿತ್ತು.
ರಾತ್ರಿ 9.30 ರ ವೇಳೆಗೆ ಮೋದಿ-ದೋವಲ್-ಪರಿಕ್ಕರ್ ನಡುವೆ ಬಹುಮುಖ್ಯವಾದ ಚರ್ಚೆ ನಡೆದಿತ್ತು.
ಅದು ಪಾಕಿಸ್ತಾನ ದ ಉಗ್ರ ನೆಲೆಗಳ ಧ್ವಂಸದ ಕುರಿತು.. ಸರಿಯಾಗಿ ನಡುರಾತ್ರಿ ಸೇನೆ ಉಗ್ರರ ಭೇಟೆಗೆ ಇಳಿದಿತ್ತು, ಬೆಳಿಗ್ಗೆಯ ವರೆಗೂ ಪ್ರಧಾನಿ ಮೋದಿಗೆ ಪ್ರತಿಕ್ಷಣದ ಮಾಹಿತಿ ಸೇನೆಯಿಂದ ರವಾನೆಯಾಗುತ್ತಿತ್ತು. ಸೇನೆಯ ಜೊತೆ ಮೋದಿಯೂ ನಿದ್ದೆ ಬಿಟ್ಟು ಕಾದು ಕುಳಿತಿದ್ದರು.. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ.
ನಮಗೂ ಹೋರಾಡಲು ಬರುತ್ತದೆ. ಆ ಹೋರಾಟ ಬಡತನ ನಿವಾರಣೆಗಾಗಿ? ನಿರುದ್ಯೋಗ ಕುಗ್ಗಿಸುವಲ್ಲಿ.. ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕುವಲ್ಲಿ.. ತಾಕತ್ತಿದ್ದರೇ ನೀವು ಇದಕ್ಕಾಗಿ ಹೋರಾಡಿ ಎಂದು ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಇಡೀ ರಾತ್ರಿ ನಿದ್ರೆ ಮಾಡಿಲ್ಲ.. ಅವರಿಗೆ ಸಮಾಧಾನ ಸಿಕ್ಕಿದ್ದು, 38 ಉಗ್ರರು ಹಾಗೂ ಇಬ್ಬರು ಪಾಕಿಸ್ತಾನ ಸೈನಿಕರನ್ನು ಭಾರತೀಯ ಯೋಧರು ಸದೆಬಡಿದ ಸುದ್ದಿ ಕಿವಿ ಮುಟ್ಟಿದ ನಂತರವೇ?
ಕೊನೆಗೂ ಮೋದಿ ಕೊಟ್ಟ ಮಾತನ್ನು ಉಳಿಸಿಕೊಂಡರು.. ಉರಿಯಲ್ಲಿ ಹುತಾತ್ಮರಾದ ಯೋಧರ ಆತ್ಮಗಳಿಗೆ ಇಂದು ಮುಕ್ತಿ ದೊರೆತಿರಬಹುದು.
Discussion about this post